Responsive Ad Slot

Latest

latest

ರಂಭಾ ಹಾಗೂ ಮೊಹಮ್ಮದ್ ಆದಿಲ್ ಷಾ ಸುಲ್ತಾನ್ ಕಿ ಪ್ರೇಮ್ ಕಹಾನಿ

ಮಂಗಳವಾರ, ಜೂನ್ 15, 2021

/ by Indian History tv

 

ಅದು ೧೬ನೇ ಶತಮಾನ. ತ್ರಿವಳಿ ನದಿಗಳ ನಾಡು ಬಿಜಾಪುರ ಜಿಲ್ಲೆಯಲ್ಲಿ ಹಲವು ಭಾಷೆ ಕಲೆ, ಸಂಸ್ಕೃತಿ ಒಟ್ಟಿಗೆ ಸೇರಿಸಿದ ಭಾವೈಕ್ಯತೆಯ ಹರಿಕಾರ ಎರಡನೇ ಇಬ್ರಾಹಿಂ ಆದಿಲ್ ಷಾ. ಈತ ಬಿಜಾಪುರ ಸುಲ್ತಾನರಲ್ಲೇ ಅತ್ಯಂತ ಪ್ರಸಿದ್ಧಿ ಪಡೆದು ನಿಧನವಾಗುತ್ತಾನೆ ... ಇವನ ನಂತರ ೧೬೨೬ ರಲ್ಲಿ ಆದಿಲ್ ಷಾ ವಂಶದ ಕುಡಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.. ಆತನೇ  ನಮ್ಮ ಕಥಾನಾಯಕ ಮೊಹಮ್ಮದ್ ಆದಿಲ್ ಷಾ..

             

ಮೊಹಮ್ಮದ್ ಆದಿಲ್ ಷಾ ಪಟ್ಟಕ್ಕೇರಿದ ನಂತರ ರಾಜ್ಯದಲ್ಲಿ ತಂದೆ ಹಾಕಿದ್ದ ಬುನಾದಿಯ ಮೇಲೆ ಸುತ್ತಮತ್ತ  ರಾಜ್ಯಗಳ ಗೆಳೆತನ ಬೆಳೆಸಿ ವಿಜಾಪುರದಲ್ಲಿ ಶಾಂತಿ ಕಾಯ್ದುಕೊಂಡ. ತಂದೆಯAತೆ ಮಗನೂ ನೃತ್ಯ, ಸಂಗೀತ, ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ ಇದರಿಂದ ರಾಜ್ಯದಲ್ಲಿನ ಬಹುಸಂಖ್ಯಾತ ಪ್ರಜೆಗಳಾದ ಹಿಂದೂಗಳ ವಿಶ್ವಾಸಗಳಿಸಿ ಆಸ್ಥಾನದಲ್ಲಿ ಕಲಾವಿದರ ದಂಡೇ ತನ್ನ ರಾಜಧಾನಿಯಲ್ಲಿ ಇರುವಂತೆ ನೋಡಿಕೊಂಡ

 

ಇದೆಲ್ಲದರ ಜೊತೆಗೆ ಈತನ ಜ್ಞಾನ ದಾಹ, ಪರಮತ ಸಹಿಷ್ಣುತೆ, ಕಲೋಪಾಸನೆ ಅಧ್ಯಾತ್ಮಿಕ ಒಲವಿ ನಿಂದ ಕೆಲವೇ ದಿನಗಳಲ್ಲಿ ಎತ್ತರಕ್ಕೆ ಬೆಳೆದುನಿಂತ.  ಈತನ ಆಡಳಿತದುದ್ದಕ್ಕೂ ಕಲಾ ಸರಸ್ವತಿ ಪೂಜಿಸುವುದನ್ನ ಮಾತ್ರ ಮರೆಯಲಿಲ್ಲ...ಇದಕ್ಕಾಗಿ ಬಿಜಾಪುರದಲ್ಲಿ ಸಂಗೀತ ಮಹಲನ್ನ ನಿರ್ಮಿಸಿದ. ದೊರೆಯ ಸಂಗೀತ ಪ್ರೇಮಕ್ಕೆ ಪ್ರಜೆಗಳು ಮಾರುಹೋಗಿದ್ರು.. 

 

ಸಂಗೀತ ಪ್ರೇಮಿ ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಗೋಲ್ ಗುಂಬಜ್. ಗುಂಬಜ್ ನಿರ್ಮಾ ಣದ ಹೊಣೆಯನ್ನ ದಾಬುಲ್ ಪ್ರಸಿದ್ಧ ವಾಸ್ತುಶಿಲ್ಪಿ ಹಾಗೂ ತನ್ನ ರಾಜ್ಯದ ಉಸ್ತವಾರಿ ವಾಸ್ತು ಶಿಲ್ಪಕಾ ಮಲಿಕ್ ಯಾಕೂಬ್ ದಾಬೂಲಿಗೆ ವಹಿಸಿಲಾಯ್ತು...ಆದ್ರೆ ಈತ ಕಟ್ಟಡವನ್ನ ನಿರ್ಮಿಸಲು ತೆಗೆದು ಕೊಂಡ ಸಮಯವೆಷ್ಟುಗೊತ್ತೆ ಬರೋಬ್ಬರಿ ೩೦ ವರ್ಷ..

 

ಸುಮಾರು ೬೫ ಎಕರೆ ಪ್ರದೇಶದಲ್ಲಿ ೨೦೬ ಅಡಿ ಎತ್ತರದ ಕಟ್ಟಡವನ್ನ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಿಲಾಯ್ತು.. ಗೋಲ್ ಗುಂಬಜ್ ಸುತ್ತಲಿನ ಗೋಡೆ ೧೯೮ ಅಡಿ ಎತ್ತರವಾಗಿದೆ... ಗೋಡೆಗಳ ಮೇಲೆ ನಿರ್ಮಾಣವಾಗಿರುವ ಗುಂಬಜ್ ಕಣ್ಣಿಗೆ ಕಾಣುವ ಯಾವುದೇ ಆಸರೆ ಇಲ್ಲದೆ ನಿಂತಿದೆ.....ಇದರ ವಿಶಾಲವಾದ ಹಾಲ್ ವಿಸ್ತೀರ್ಣ ೧೮,೩೩,೭೬೭ ಚದುರಡಿಗಳು....

 

ಪ್ರತಿಯೊಂದು ಗೋಡೆಗಳಲ್ಲಿ ಮೂರು ಕಮಾನುಗಳಿವೆ.. ಇದು ಜಗತ್ತಿನ ಅತೀ ದೊಡ್ಡ ಸಿಂಗಲ್ ಛೇಂಬ ರ್ ಸ್ಟ್ರಕ್ಚರ್ಗಳಲ್ಲಿ ಒಂದಾಗಿದೆ.. ರೋಮ್ ನಗರದ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತು ಪಡಿಸಿದ್ರೆ ಗುಂಬಜ್ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು.. ಇಲ್ಲಿನ ಪಿಸುಗುಟ್ಟುವ ಗ್ಯಾಲರಿ ಅಥವ ವಿಷ್ಪರಿಂಗ್ ಗ್ಯಾಲರಿಯಲ್ಲಿ ಮೆಲುದನಿಯಲ್ಲಿ ಆಡಿದ ಮಾತನ್ನ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ ಅದು ಹತ್ತು ಸಲ ಪ್ರತಿಧ್ವನಿಸುತ್ತೆ....

 

ಆದ್ರೆ ಇಲ್ಲಿನ ವಾಸ್ತು ಶಿಲ್ಪಗಳಲ್ಲಿ ಶಿಲ್ಪವಾಗಿ ಪಿಸುಮಾತಿನ ಗ್ಯಾಲರಿಯಲ್ಲಿ ರಂಭಾಳ ಪ್ರೇಮ ನಿವೇದನೆ ಇಂದಿಗೂ ಸಹ ಪ್ರತಿಧ್ವನಿಸುತ್ತಿದೆ.... 

 

ರಂಭಾ ಯಾರು?

  ರಂಭಾ ಯಾರು ಗುಂಬಜ್ ನಲ್ಲಿ ಆಕೆಯ ಪ್ರೇಮ ನಿವೇದನೆ ಸದ್ದು ಇಂದಿಗೂ ಯಾಕೆ ಪ್ರತಿಧ್ವನಿಸುತ್ತಿದೆ.. ಏನಿದರ ಹಿಂದಿನ ರಹಸ್ಯ

 

ನೆನಪುಗಳೇ ಹಾಗೆ  ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ....... ಅವು ಮತ್ತವೇ ನೊಂದ ಮನಸ್ಸುಗಳ ಜೊತೆ ಸಂಬA ಬೆಸೆದು ಸಂತೈಸಿ ಸದಾ ನಗಿಸ್ತವೆ ಅಳಿಸ್ತವೆ... ದೊರೆ ಮೊಹಮ್ಮದ್  ಆದಿಲ್ ಷಾ ತನ್ನ ಆಡಳಿತದುದಕ್ಕೂ ದಕ್ಷಿಣ ಭಾರತದ ಬಹುಭಾಗ ಗೆದ್ದು ತನ್ನ ಪ್ರಭಲ್ಯವನ್ನ ಮೆರೆದಿದ್ದಾತ.... ಆದ್ರೆ ಈತ ಗೆದ್ದ ರಾಜ್ಯಗಳನ್ನ ತಾನು ಆಡಳಿತ ಮಾಡದೆ  ಹಿಂದೂ ಮತ್ತು ಮರಾಠ ದಂಡನಾಯಕರ ಆಡಳಿತಕ್ಕೆ ವಹಿಸಿದ್ದ.. ಹೀಗಿರುವಾಗಲೆ ಆದಿಲ್ ಷಾ ಆಸ್ತಾನಕ್ಕೆ ಸಿಲೋನ್ ದೇಶದ ಅಪ್ರತಿಮ ಚೆಲುವೆ ಕಾಲಿಡುತ್ತಾಳೆ ಆಕೆಯೇ ರಂಭಾದೇವಿ...

 

ಹೌದು ಅಂದು ಭೂಲೋಕದ ಚೆಲುವೆ ರಂಭಾಳನ್ನ ನೋಡುವ ತವಕ ಸಾಮ್ರಾಜ್ಯದ ಜನತೆಯಲ್ಲಿ ಮನೆಮಾಡಿತ್ತು..  ಆದಿಲ್ ಷಾ ನೋಡಿದ ಮೊದಲ ನೋಟದಲ್ಲೇ ಮನಸೋತ್ತು ಬಿಟ್ಟ. ಅಂದು ದೂರದಲ್ಲಿ  ರಂಭಾಳ ಮುತ್ತಿನ ಪಂಜರದ ತಲೆಯಬಾಗಕ್ಕೆ ಕಟ್ಟಿದ ಸೂಕ್ಷ್ಮ ಕೊಂಡಿಗೆ ಗುರಿಯಿಟ್ಟು ಬಾಣ ಹೂಡೆಯುತ್ತಾನೆ... ಕೊಂಡಿ ಕಳಚ್ಚಿ ಮುತ್ತಿನ ಮಣಿಗಳು ಕೆಳಗೆ ಜಾರಿ ಅದರಲ್ಲಿ ಬಂದಿಯಾಗಿದ್ದ ರಂಭಾಳ ಚೆಲುವಿನ ದರ್ಶನವಾಗುತ್ತೆ...  ದೊರೆಯ ಮೊದಲ ಬಾಣಕ್ಕೆ ರಂಭಾ ತನ್ನ ಮನಸ್ಸನ್ನ ಸಮರ್ಪಿಸಿದ್ಲು...  ಆಪ್ರತಿಮ ಚೆಲುವೆಯನ್ನು ಕಂಡವರಿಗೆ ಆಕೆಯ ಪ್ರತಿಭೆ ವೀಕ್ಷಿಸುವ ತವಕವಿತ್ತು..   ರಂಭಾಳ ಸೌಂದರ್ಯದಷ್ಟೆ ಮದುರ ಅವಳ ಕಂಠ.... ಸಂಗೀತದ ಜೊತೆ ರಂಭಾಳ ನೃತ್ಯ ನೆರೆದಿದ್ದವರ ಎದೆಯ ಲ್ಲಿ ಮಿಂಚಿನ ಸಂಚಕಾರ ಉಂಟುಮಾಡಿತ್ತು... ಹಾಡಿ ಕುಣಿದು ಒಂದೇ ದಿನದಲ್ಲಿ ಎಲ್ಲರ ಮನಸ್ಸನ್ನ ಗೆದ್ಲು.. ದೊರೆ ಮೊಹಮ್ಮದ್ ಆದಿಲ್ ಷಾ ಅಂತು ಕಣ್ಣಲ್ಲಿ ಕಣ್ಣಿಟ್ಟು ರಂಭಾಳ ನೃತ್ಯ ವಿಕ್ಷಿಸಿ ಕಲೆಯನ್ನ ಮೆಚ್ಚಿ ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನೇ ಬಹುಮಾನವಾಗಿ ನೀಡಿಬಿಟ್ಟ.. ಆದಿಲ್ ಷಾ ಆಕೆಯ ಪ್ರೇಮ ಪಾಶದಲ್ಲಿ ಸಿಕ್ಕಿಕೊಂಡ.. ಆದ್ರೆ ರಂಭಾ ತನ್ನ ಪ್ರತಿಭೆಯಿಂದ ಆಸ್ಥಾನದ ಮಹಾನ್ ದಿಗ್ಜರಿಗಿಂತ ಒಂದು ಹೆಜ್ಜೆ ಮುಂದೆ ಸಾಗಿ ಸಾಮ್ರಾಜ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಕೆಯ ಗುರುತರ ಜವಾಬ್ಧಾರಿ ಪಡೆದ್ಲು..

 

ನಡುವೆ ಆದಿಲ್ ಷಾ ಮನದಲ್ಲಿ ತಳಮಳ ಶುರುವಾಗಿತ್ತು ರಂಭಾಳ ಮುಂದೆ ತನ್ನ ಪ್ರೇಮ ನಿವೇದಿಕೊಳ್ಳ ಬೇಕೆಂದು ನಿರ್ಧರಿಸಿ ಬಿಟ್ಟ...ಆದ್ರೆ ದೊರೆಗಿಂತ ಮೊದಲೆ ರಂಭಾ ಕೂಡ ಆದಿಲ್ ಷಾನ ಹೃದಯದಲ್ಲಿಟ್ಟು ಆರಾದಿಸಿದ್ಲು.. ಪ್ರೇಮಿಗಳು ಮನಸ್ಸಿನ ಭಾವನೆಗಳನ ಹೆಚ್ಚು ದಿನ ಮುಚ್ಚಿಡಲಾಗದೆ ರಂಭಾ ಷಾ ಮುಂದೆ ತನ್ನ ಪ್ರೇಮ ನಿವೇದಿಸುತ್ತಾಳೆ.. ದೊರೆ ಪ್ರೇಮಕ್ಕೆ ಸಮ್ಮತಿ ಸೂಚಿಸುತ್ತಾನೆ..

 

ರಂಭಾಳ ಬದುಕಿನ ಮುಖ್ಯ ತಿರುವಿನಲ್ಲಿ ಸಂಭ್ರಮದ ಭಾವಗೀತೆ ಪಲ್ಲವಿಸುವಾಗ ಅಪಸ್ವರದ ಉನ್ಮಾ ಜಾತಿಯದ್ದಾಗಿತ್ತು ಹೌದು ರಂಭಾ ಹಿಂದೂ ಆದಿಲ್ ಷಾ ಮುಸ್ಲಿಂಮ್ ಇಬ್ಬರ ಪ್ರೀತಿಗೆ ಜಾತಿ ಅಡ ಬಂದಿತ್ತು

 

ಹಿಂದು ಧರ್ಮದವಳಾದ ರಂಭಾದೇವಿ ತನ್ನ ಕಲೆ ಮತ್ತು ಸೌಂದರ್ಯದಿA ರಾಜ ಮನೆತನದಲ್ಲಿ ಬಹು ಬೇಗನೆ ಹೆಸರು ವಾಸಿಯಾಗಿದ್ದಳು... ಪ್ರೇಮಿಗಳು ಒಬ್ಬರನ್ನ ಬಿಟ್ಟು ಒಬ್ಬರು ಒಂದು ಕ್ಷಣವೂ ದೂರವಿರಲ್ಲು ಬಯಸುವುದಿಲ್ಲ...

 

ರಂಭಾಳು ಕೂಡ ತನ್ನ ಬಾವನೆಗಳನ್ನ ಪ್ರೇಮಪತ್ರದಲ್ಲಿ ಗೀಚಿ ಪತ್ರವನ್ನ ತಾವರೆ ಮೊಗ್ಗಿನಲ್ಲಿಟ್ಟು ದೊರೆಯ ಅಂತ್ಹಪುರಕ್ಕೆ ಸಂಪರ್ಕವಿದ ನೀರಿನಲ್ಲಿ ರವಾಸಿಸುತಿದ್ದಳು.. ತಾವರೆ ಮೊಗ್ಗು ಅರಳಿ ತನ್ನ ಪರಿಮಳದಿಂದ ದೊರೆಯಗಮನ ಸೆಳೆದು ಪ್ರೇಮ ಪತ್ರವನ್ನ ನೋಡಿದ ದೊರೆ ರಂಭಾಳ ಪ್ರೀತಿಗೆ ಅವಳ ಸ್ಪರ್ಷಕ್ಕೆ ಹಾತೊರೆಯುತಿದ್ದ...ಹೀಗಿರುವಾಗಲ್ಲೆ ರಂಭಾಳಿಗಾಗಿ ಸಂಗೀತವನ್ನ ಎರ್ಪಡಿಸಿದ್ದ ಸಂಗೀತದ ಮಾದುರ್ಯಕ್ಕೆ ಮನ ಸೋತ ರಂಭಾ ಸಂಗೀತ ಸದ್ದನ್ನೇ ಹಾಲಿಸುತ್ತ ದೊರೆ ಅಂತ್ಹಪುರ ಪ್ರವೇಶಿಸುತ್ತಾಳೆ.. ದೊರೆ ರಂಭಾಳಿಗೆ ಸಂಗೀತದ ಜೊತೆ ಹೂ ಮಂಚವನ್ನ ಸಿದ್ದಪಡಿಸಿದ್ದ...

 

 ತನ್ನ ಇಡೀ ಬದುಕನ್ನು ನಿಮ್ಮ ಜೊತೆ ಕಳೆಯಬೇಕಿದೆ. ನನ್ನ ಖುಷಿಯ ಕಣಕಣವನ್ನೂ ನಿನ್ನ ಬದುಕಿಗೆ ಸುರಿಯಬೇಕಿದೆ, ದುಃಖ ಮಾತ್ರ ಇರುವೆಯ ಪಾದದಷ್ಟೂ ನಿನಗೆ ಸೋಕಿಸದಂತೆ ಬಾಳಬೇಕಿದೆ. ಅದಕ್ಕಾಗಿ ನನ್ನ ಬದುಕನ್ನು ಕೇವಲ ನಿಮ್ಮ ಜತೆಯಷ್ಟೇ ಹಂಚಿಕೊಳ್ಳಬೇಕೆAದು ರಂಭಾ ದೊರೆಗೆ ಹೇಳುತ್ತಾಳೆ.

 

ಇಷ್ಟೆಲ್ಲಾ ತನ್ನ ಪ್ರೇಮಿಗಾಗಿ ಮರಳಿನ ಸೌದ ನಿರ್ಮಿಸಿದ ರಂಭಾಗೆ ದುರಂತ ಎದುರಾಗಿತ್ತು.. ಅಂದು ರಂಭಾ ಬಿಜಾಪುರ ಆಸ್ಥಾನಕ್ಕೆ ಕಾಲಿಡುವ ಮೊದಲೆ ದೊರೆ ನಾಲ್ಕು ವಿವಾಹವಾಗಿದ... ನಾಲ್ಕು ಜನ ಹೆಂಡತಿಯರ ಜೊತೆ ಸಂಸಾರ ನಡೆಸುತ್ತಿರುವಾಗಲ್ಲೇ ರಂಭಾ ಜೊತೆಗಿನ ಪ್ರೇಮ ದೊರೆಗೆ ನುಂಗಲಾ ತುತ್ತಾಗಿ ಪರಿಣಮಿಸಿತ್ತು..   

 

 ದೊರೆಗೆ ತನನ್ನ ಮಡದಿಯಾಗಿ ಸ್ವೀಕರಿಸುವಂತೆ ತನ್ನ ಮನದಾಳದ ಆಸೆ ವ್ಯಕ್ತಪಡಿಸುತ್ತಾಳೆ.. ಆದ್ರೆ ದೊರೆ ಹಿಂದೂ ಮುಸ್ಲಿಂ ಧರ್ಮಗಳು ಸಮಾಗಮವಾಗುವುದು ಸಾಧ್ಯವಿಲ್ಲವೆಂದು ಅರಿತು ಮೆಹೆಬೂ ಬ್ ಬನಕೆ ರೆಹೆನಾ, ಬೀವಿ ಬನಕರ್ ನಹೀ ದೊರೆಯ ಉತ್ತರ ರಂಭಾ ಕಣ್ಣಲ್ಲಿ ಜಾರಿದ ನಾಲ್ಕು ಹನಿಗಳು ಅರ್ಥ ಕಳೆದುಕೊಂಡ ಬದುಕಿನ ಕೊನೆ ತಿರುವಿಗೆ ತಂದುನಿಲ್ಲಿಸಿತು.

ಭಾರವಾದ ಮನಸ್ಸಿನಿಂದ ಎಂದಿನAತೆ ಮೆಹಫಿಲ್ ಕಾನದಲ್ಲಿ ನೃತ್ಯಮಾಡುವಾಗ ದೊರೆಗೆ ರಂಭಾ ಮತ್ತೆ ತನ್ನ ಪ್ರೇಮ ನಿವೇದಿಸುತ್ತಾಳೆ  ಆಗ ದೊರೆ ಮೊಹಮ್ಮದ್ ಆದಿಲ್ ಷಾ, ತುಮ್ ಕಿತನೆ ಪ್ಯಾರ ಕರತೆ ಹೋ ಮುಜಸೇ, ಯಹಾ ಸೇ ಗಿರಸಕ್ತೆ ಹೋ ಎಂದಾಗ ಮರು ಮಾತಿಲ್ಲದೆ ರಂಭಾ, ತನ್ನ ಪ್ರೀತಿಯನ್ನು ಪ್ರಮಾಣೀಕರಿಸುವುದಕ್ಕಾಗಿ ಗೋಲ ಗುಂಬಜ್ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ.....

 

ರಂಭಾಳ ಪ್ರಾಣ ಪಕ್ಷಿ ಹಾರಿಹೋದ ಮೇಲೆ ದೊರೆ ಮೊಹಮ್ಮದ್ ಆದಿಲ್ ಷಾ ರಂಭಾಳ ಪ್ರೇಮದ ನೆನಪಾಗಿ ರಂಭಾ ನರ್ತಿಸುತ್ತಿದ್ದ ಮೆಹೆಫಲ್ ಖಾನೆಯ ಮೇಲೆ ರಂಭಾಳ ಗೋರಿ ನಿರ್ಮಿಸಿ ರಾಜ ಪರಿವಾರದಲ್ಲೊಂದು ಸ್ಧಾನ ನೀಡಿದ. ನಂತರ ಸುಲ್ತಾನ ತೀರಿಕೊಂಡ. ಆಗ ದೊರೆಯ ಗೋರಿಯನ್ನ ರಂಭಾಳ ಗೋರಿ ಪಕ್ಕದಲ್ಲೇ ನಿರ್ಮಿಸಲಾಗಿದೆ. ಅಮರ ಪ್ರೇಮದ ಅಂತ್ಯ ದಾರೂಣವಾದ್ರೂ ಇಲ್ಲಿನ ಪ್ರತಿದಿನದ ಮುಂಜಾನೆಯ ಸೂರ್ಯ ರಶ್ಮಿ ಮಾತ್ರ ಸುಲ್ತಾನ ಮತ್ತು ರಂಭಾಳ ಗೋರಿಯ ಮೇಲೆ ಪ್ರಕಾಶಿಸುತ್ತೆ.. ಕಿರಣಗಳು ಅಂದಿನ ಪ್ರೇಮ ಚರಿತ್ರೆಯನ್ನ ಇಂದಿಗೂ ಹೇಳುತ್ತಿದೆ.. ಆದ್ರೆ ಇವರ ಪ್ರೇಮ ಚರಿತ್ರೆ ಇತಿಹಾಸದಲ್ಲಿ ದಾಖಲಾಗದ್ದೇ ಇರುವುದು  ಮಾತ್ರ ದುರಂತ..

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't Miss
© all rights reserved
made with by templateszoo