Responsive Ad Slot

Latest

latest

Brexit

Brexit

Football

Football

America

America

Tech

tech

Games

games

VIDEO

Videos

News By Picture

pictures

ರಂಭಾ ಹಾಗೂ ಮೊಹಮ್ಮದ್ ಆದಿಲ್ ಷಾ ಸುಲ್ತಾನ್ ಕಿ ಪ್ರೇಮ್ ಕಹಾನಿ

ಕಾಮೆಂಟ್‌ಗಳಿಲ್ಲ

 

ಅದು ೧೬ನೇ ಶತಮಾನ. ತ್ರಿವಳಿ ನದಿಗಳ ನಾಡು ಬಿಜಾಪುರ ಜಿಲ್ಲೆಯಲ್ಲಿ ಹಲವು ಭಾಷೆ ಕಲೆ, ಸಂಸ್ಕೃತಿ ಒಟ್ಟಿಗೆ ಸೇರಿಸಿದ ಭಾವೈಕ್ಯತೆಯ ಹರಿಕಾರ ಎರಡನೇ ಇಬ್ರಾಹಿಂ ಆದಿಲ್ ಷಾ. ಈತ ಬಿಜಾಪುರ ಸುಲ್ತಾನರಲ್ಲೇ ಅತ್ಯಂತ ಪ್ರಸಿದ್ಧಿ ಪಡೆದು ನಿಧನವಾಗುತ್ತಾನೆ ... ಇವನ ನಂತರ ೧೬೨೬ ರಲ್ಲಿ ಆದಿಲ್ ಷಾ ವಂಶದ ಕುಡಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.. ಆತನೇ  ನಮ್ಮ ಕಥಾನಾಯಕ ಮೊಹಮ್ಮದ್ ಆದಿಲ್ ಷಾ..

             

ಮೊಹಮ್ಮದ್ ಆದಿಲ್ ಷಾ ಪಟ್ಟಕ್ಕೇರಿದ ನಂತರ ರಾಜ್ಯದಲ್ಲಿ ತಂದೆ ಹಾಕಿದ್ದ ಬುನಾದಿಯ ಮೇಲೆ ಸುತ್ತಮತ್ತ  ರಾಜ್ಯಗಳ ಗೆಳೆತನ ಬೆಳೆಸಿ ವಿಜಾಪುರದಲ್ಲಿ ಶಾಂತಿ ಕಾಯ್ದುಕೊಂಡ. ತಂದೆಯAತೆ ಮಗನೂ ನೃತ್ಯ, ಸಂಗೀತ, ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ ಇದರಿಂದ ರಾಜ್ಯದಲ್ಲಿನ ಬಹುಸಂಖ್ಯಾತ ಪ್ರಜೆಗಳಾದ ಹಿಂದೂಗಳ ವಿಶ್ವಾಸಗಳಿಸಿ ಆಸ್ಥಾನದಲ್ಲಿ ಕಲಾವಿದರ ದಂಡೇ ತನ್ನ ರಾಜಧಾನಿಯಲ್ಲಿ ಇರುವಂತೆ ನೋಡಿಕೊಂಡ

 

ಇದೆಲ್ಲದರ ಜೊತೆಗೆ ಈತನ ಜ್ಞಾನ ದಾಹ, ಪರಮತ ಸಹಿಷ್ಣುತೆ, ಕಲೋಪಾಸನೆ ಅಧ್ಯಾತ್ಮಿಕ ಒಲವಿ ನಿಂದ ಕೆಲವೇ ದಿನಗಳಲ್ಲಿ ಎತ್ತರಕ್ಕೆ ಬೆಳೆದುನಿಂತ.  ಈತನ ಆಡಳಿತದುದ್ದಕ್ಕೂ ಕಲಾ ಸರಸ್ವತಿ ಪೂಜಿಸುವುದನ್ನ ಮಾತ್ರ ಮರೆಯಲಿಲ್ಲ...ಇದಕ್ಕಾಗಿ ಬಿಜಾಪುರದಲ್ಲಿ ಸಂಗೀತ ಮಹಲನ್ನ ನಿರ್ಮಿಸಿದ. ದೊರೆಯ ಸಂಗೀತ ಪ್ರೇಮಕ್ಕೆ ಪ್ರಜೆಗಳು ಮಾರುಹೋಗಿದ್ರು.. 

 

ಸಂಗೀತ ಪ್ರೇಮಿ ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಗೋಲ್ ಗುಂಬಜ್. ಗುಂಬಜ್ ನಿರ್ಮಾ ಣದ ಹೊಣೆಯನ್ನ ದಾಬುಲ್ ಪ್ರಸಿದ್ಧ ವಾಸ್ತುಶಿಲ್ಪಿ ಹಾಗೂ ತನ್ನ ರಾಜ್ಯದ ಉಸ್ತವಾರಿ ವಾಸ್ತು ಶಿಲ್ಪಕಾ ಮಲಿಕ್ ಯಾಕೂಬ್ ದಾಬೂಲಿಗೆ ವಹಿಸಿಲಾಯ್ತು...ಆದ್ರೆ ಈತ ಕಟ್ಟಡವನ್ನ ನಿರ್ಮಿಸಲು ತೆಗೆದು ಕೊಂಡ ಸಮಯವೆಷ್ಟುಗೊತ್ತೆ ಬರೋಬ್ಬರಿ ೩೦ ವರ್ಷ..

 

ಸುಮಾರು ೬೫ ಎಕರೆ ಪ್ರದೇಶದಲ್ಲಿ ೨೦೬ ಅಡಿ ಎತ್ತರದ ಕಟ್ಟಡವನ್ನ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಿಲಾಯ್ತು.. ಗೋಲ್ ಗುಂಬಜ್ ಸುತ್ತಲಿನ ಗೋಡೆ ೧೯೮ ಅಡಿ ಎತ್ತರವಾಗಿದೆ... ಗೋಡೆಗಳ ಮೇಲೆ ನಿರ್ಮಾಣವಾಗಿರುವ ಗುಂಬಜ್ ಕಣ್ಣಿಗೆ ಕಾಣುವ ಯಾವುದೇ ಆಸರೆ ಇಲ್ಲದೆ ನಿಂತಿದೆ.....ಇದರ ವಿಶಾಲವಾದ ಹಾಲ್ ವಿಸ್ತೀರ್ಣ ೧೮,೩೩,೭೬೭ ಚದುರಡಿಗಳು....

 

ಪ್ರತಿಯೊಂದು ಗೋಡೆಗಳಲ್ಲಿ ಮೂರು ಕಮಾನುಗಳಿವೆ.. ಇದು ಜಗತ್ತಿನ ಅತೀ ದೊಡ್ಡ ಸಿಂಗಲ್ ಛೇಂಬ ರ್ ಸ್ಟ್ರಕ್ಚರ್ಗಳಲ್ಲಿ ಒಂದಾಗಿದೆ.. ರೋಮ್ ನಗರದ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತು ಪಡಿಸಿದ್ರೆ ಗುಂಬಜ್ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು.. ಇಲ್ಲಿನ ಪಿಸುಗುಟ್ಟುವ ಗ್ಯಾಲರಿ ಅಥವ ವಿಷ್ಪರಿಂಗ್ ಗ್ಯಾಲರಿಯಲ್ಲಿ ಮೆಲುದನಿಯಲ್ಲಿ ಆಡಿದ ಮಾತನ್ನ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ ಅದು ಹತ್ತು ಸಲ ಪ್ರತಿಧ್ವನಿಸುತ್ತೆ....

 

ಆದ್ರೆ ಇಲ್ಲಿನ ವಾಸ್ತು ಶಿಲ್ಪಗಳಲ್ಲಿ ಶಿಲ್ಪವಾಗಿ ಪಿಸುಮಾತಿನ ಗ್ಯಾಲರಿಯಲ್ಲಿ ರಂಭಾಳ ಪ್ರೇಮ ನಿವೇದನೆ ಇಂದಿಗೂ ಸಹ ಪ್ರತಿಧ್ವನಿಸುತ್ತಿದೆ.... 

 

ರಂಭಾ ಯಾರು?

  ರಂಭಾ ಯಾರು ಗುಂಬಜ್ ನಲ್ಲಿ ಆಕೆಯ ಪ್ರೇಮ ನಿವೇದನೆ ಸದ್ದು ಇಂದಿಗೂ ಯಾಕೆ ಪ್ರತಿಧ್ವನಿಸುತ್ತಿದೆ.. ಏನಿದರ ಹಿಂದಿನ ರಹಸ್ಯ

 

ನೆನಪುಗಳೇ ಹಾಗೆ  ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ....... ಅವು ಮತ್ತವೇ ನೊಂದ ಮನಸ್ಸುಗಳ ಜೊತೆ ಸಂಬA ಬೆಸೆದು ಸಂತೈಸಿ ಸದಾ ನಗಿಸ್ತವೆ ಅಳಿಸ್ತವೆ... ದೊರೆ ಮೊಹಮ್ಮದ್  ಆದಿಲ್ ಷಾ ತನ್ನ ಆಡಳಿತದುದಕ್ಕೂ ದಕ್ಷಿಣ ಭಾರತದ ಬಹುಭಾಗ ಗೆದ್ದು ತನ್ನ ಪ್ರಭಲ್ಯವನ್ನ ಮೆರೆದಿದ್ದಾತ.... ಆದ್ರೆ ಈತ ಗೆದ್ದ ರಾಜ್ಯಗಳನ್ನ ತಾನು ಆಡಳಿತ ಮಾಡದೆ  ಹಿಂದೂ ಮತ್ತು ಮರಾಠ ದಂಡನಾಯಕರ ಆಡಳಿತಕ್ಕೆ ವಹಿಸಿದ್ದ.. ಹೀಗಿರುವಾಗಲೆ ಆದಿಲ್ ಷಾ ಆಸ್ತಾನಕ್ಕೆ ಸಿಲೋನ್ ದೇಶದ ಅಪ್ರತಿಮ ಚೆಲುವೆ ಕಾಲಿಡುತ್ತಾಳೆ ಆಕೆಯೇ ರಂಭಾದೇವಿ...

 

ಹೌದು ಅಂದು ಭೂಲೋಕದ ಚೆಲುವೆ ರಂಭಾಳನ್ನ ನೋಡುವ ತವಕ ಸಾಮ್ರಾಜ್ಯದ ಜನತೆಯಲ್ಲಿ ಮನೆಮಾಡಿತ್ತು..  ಆದಿಲ್ ಷಾ ನೋಡಿದ ಮೊದಲ ನೋಟದಲ್ಲೇ ಮನಸೋತ್ತು ಬಿಟ್ಟ. ಅಂದು ದೂರದಲ್ಲಿ  ರಂಭಾಳ ಮುತ್ತಿನ ಪಂಜರದ ತಲೆಯಬಾಗಕ್ಕೆ ಕಟ್ಟಿದ ಸೂಕ್ಷ್ಮ ಕೊಂಡಿಗೆ ಗುರಿಯಿಟ್ಟು ಬಾಣ ಹೂಡೆಯುತ್ತಾನೆ... ಕೊಂಡಿ ಕಳಚ್ಚಿ ಮುತ್ತಿನ ಮಣಿಗಳು ಕೆಳಗೆ ಜಾರಿ ಅದರಲ್ಲಿ ಬಂದಿಯಾಗಿದ್ದ ರಂಭಾಳ ಚೆಲುವಿನ ದರ್ಶನವಾಗುತ್ತೆ...  ದೊರೆಯ ಮೊದಲ ಬಾಣಕ್ಕೆ ರಂಭಾ ತನ್ನ ಮನಸ್ಸನ್ನ ಸಮರ್ಪಿಸಿದ್ಲು...  ಆಪ್ರತಿಮ ಚೆಲುವೆಯನ್ನು ಕಂಡವರಿಗೆ ಆಕೆಯ ಪ್ರತಿಭೆ ವೀಕ್ಷಿಸುವ ತವಕವಿತ್ತು..   ರಂಭಾಳ ಸೌಂದರ್ಯದಷ್ಟೆ ಮದುರ ಅವಳ ಕಂಠ.... ಸಂಗೀತದ ಜೊತೆ ರಂಭಾಳ ನೃತ್ಯ ನೆರೆದಿದ್ದವರ ಎದೆಯ ಲ್ಲಿ ಮಿಂಚಿನ ಸಂಚಕಾರ ಉಂಟುಮಾಡಿತ್ತು... ಹಾಡಿ ಕುಣಿದು ಒಂದೇ ದಿನದಲ್ಲಿ ಎಲ್ಲರ ಮನಸ್ಸನ್ನ ಗೆದ್ಲು.. ದೊರೆ ಮೊಹಮ್ಮದ್ ಆದಿಲ್ ಷಾ ಅಂತು ಕಣ್ಣಲ್ಲಿ ಕಣ್ಣಿಟ್ಟು ರಂಭಾಳ ನೃತ್ಯ ವಿಕ್ಷಿಸಿ ಕಲೆಯನ್ನ ಮೆಚ್ಚಿ ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನೇ ಬಹುಮಾನವಾಗಿ ನೀಡಿಬಿಟ್ಟ.. ಆದಿಲ್ ಷಾ ಆಕೆಯ ಪ್ರೇಮ ಪಾಶದಲ್ಲಿ ಸಿಕ್ಕಿಕೊಂಡ.. ಆದ್ರೆ ರಂಭಾ ತನ್ನ ಪ್ರತಿಭೆಯಿಂದ ಆಸ್ಥಾನದ ಮಹಾನ್ ದಿಗ್ಜರಿಗಿಂತ ಒಂದು ಹೆಜ್ಜೆ ಮುಂದೆ ಸಾಗಿ ಸಾಮ್ರಾಜ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಕೆಯ ಗುರುತರ ಜವಾಬ್ಧಾರಿ ಪಡೆದ್ಲು..

 

ನಡುವೆ ಆದಿಲ್ ಷಾ ಮನದಲ್ಲಿ ತಳಮಳ ಶುರುವಾಗಿತ್ತು ರಂಭಾಳ ಮುಂದೆ ತನ್ನ ಪ್ರೇಮ ನಿವೇದಿಕೊಳ್ಳ ಬೇಕೆಂದು ನಿರ್ಧರಿಸಿ ಬಿಟ್ಟ...ಆದ್ರೆ ದೊರೆಗಿಂತ ಮೊದಲೆ ರಂಭಾ ಕೂಡ ಆದಿಲ್ ಷಾನ ಹೃದಯದಲ್ಲಿಟ್ಟು ಆರಾದಿಸಿದ್ಲು.. ಪ್ರೇಮಿಗಳು ಮನಸ್ಸಿನ ಭಾವನೆಗಳನ ಹೆಚ್ಚು ದಿನ ಮುಚ್ಚಿಡಲಾಗದೆ ರಂಭಾ ಷಾ ಮುಂದೆ ತನ್ನ ಪ್ರೇಮ ನಿವೇದಿಸುತ್ತಾಳೆ.. ದೊರೆ ಪ್ರೇಮಕ್ಕೆ ಸಮ್ಮತಿ ಸೂಚಿಸುತ್ತಾನೆ..

 

ರಂಭಾಳ ಬದುಕಿನ ಮುಖ್ಯ ತಿರುವಿನಲ್ಲಿ ಸಂಭ್ರಮದ ಭಾವಗೀತೆ ಪಲ್ಲವಿಸುವಾಗ ಅಪಸ್ವರದ ಉನ್ಮಾ ಜಾತಿಯದ್ದಾಗಿತ್ತು ಹೌದು ರಂಭಾ ಹಿಂದೂ ಆದಿಲ್ ಷಾ ಮುಸ್ಲಿಂಮ್ ಇಬ್ಬರ ಪ್ರೀತಿಗೆ ಜಾತಿ ಅಡ ಬಂದಿತ್ತು

 

ಹಿಂದು ಧರ್ಮದವಳಾದ ರಂಭಾದೇವಿ ತನ್ನ ಕಲೆ ಮತ್ತು ಸೌಂದರ್ಯದಿA ರಾಜ ಮನೆತನದಲ್ಲಿ ಬಹು ಬೇಗನೆ ಹೆಸರು ವಾಸಿಯಾಗಿದ್ದಳು... ಪ್ರೇಮಿಗಳು ಒಬ್ಬರನ್ನ ಬಿಟ್ಟು ಒಬ್ಬರು ಒಂದು ಕ್ಷಣವೂ ದೂರವಿರಲ್ಲು ಬಯಸುವುದಿಲ್ಲ...

 

ರಂಭಾಳು ಕೂಡ ತನ್ನ ಬಾವನೆಗಳನ್ನ ಪ್ರೇಮಪತ್ರದಲ್ಲಿ ಗೀಚಿ ಪತ್ರವನ್ನ ತಾವರೆ ಮೊಗ್ಗಿನಲ್ಲಿಟ್ಟು ದೊರೆಯ ಅಂತ್ಹಪುರಕ್ಕೆ ಸಂಪರ್ಕವಿದ ನೀರಿನಲ್ಲಿ ರವಾಸಿಸುತಿದ್ದಳು.. ತಾವರೆ ಮೊಗ್ಗು ಅರಳಿ ತನ್ನ ಪರಿಮಳದಿಂದ ದೊರೆಯಗಮನ ಸೆಳೆದು ಪ್ರೇಮ ಪತ್ರವನ್ನ ನೋಡಿದ ದೊರೆ ರಂಭಾಳ ಪ್ರೀತಿಗೆ ಅವಳ ಸ್ಪರ್ಷಕ್ಕೆ ಹಾತೊರೆಯುತಿದ್ದ...ಹೀಗಿರುವಾಗಲ್ಲೆ ರಂಭಾಳಿಗಾಗಿ ಸಂಗೀತವನ್ನ ಎರ್ಪಡಿಸಿದ್ದ ಸಂಗೀತದ ಮಾದುರ್ಯಕ್ಕೆ ಮನ ಸೋತ ರಂಭಾ ಸಂಗೀತ ಸದ್ದನ್ನೇ ಹಾಲಿಸುತ್ತ ದೊರೆ ಅಂತ್ಹಪುರ ಪ್ರವೇಶಿಸುತ್ತಾಳೆ.. ದೊರೆ ರಂಭಾಳಿಗೆ ಸಂಗೀತದ ಜೊತೆ ಹೂ ಮಂಚವನ್ನ ಸಿದ್ದಪಡಿಸಿದ್ದ...

 

 ತನ್ನ ಇಡೀ ಬದುಕನ್ನು ನಿಮ್ಮ ಜೊತೆ ಕಳೆಯಬೇಕಿದೆ. ನನ್ನ ಖುಷಿಯ ಕಣಕಣವನ್ನೂ ನಿನ್ನ ಬದುಕಿಗೆ ಸುರಿಯಬೇಕಿದೆ, ದುಃಖ ಮಾತ್ರ ಇರುವೆಯ ಪಾದದಷ್ಟೂ ನಿನಗೆ ಸೋಕಿಸದಂತೆ ಬಾಳಬೇಕಿದೆ. ಅದಕ್ಕಾಗಿ ನನ್ನ ಬದುಕನ್ನು ಕೇವಲ ನಿಮ್ಮ ಜತೆಯಷ್ಟೇ ಹಂಚಿಕೊಳ್ಳಬೇಕೆAದು ರಂಭಾ ದೊರೆಗೆ ಹೇಳುತ್ತಾಳೆ.

 

ಇಷ್ಟೆಲ್ಲಾ ತನ್ನ ಪ್ರೇಮಿಗಾಗಿ ಮರಳಿನ ಸೌದ ನಿರ್ಮಿಸಿದ ರಂಭಾಗೆ ದುರಂತ ಎದುರಾಗಿತ್ತು.. ಅಂದು ರಂಭಾ ಬಿಜಾಪುರ ಆಸ್ಥಾನಕ್ಕೆ ಕಾಲಿಡುವ ಮೊದಲೆ ದೊರೆ ನಾಲ್ಕು ವಿವಾಹವಾಗಿದ... ನಾಲ್ಕು ಜನ ಹೆಂಡತಿಯರ ಜೊತೆ ಸಂಸಾರ ನಡೆಸುತ್ತಿರುವಾಗಲ್ಲೇ ರಂಭಾ ಜೊತೆಗಿನ ಪ್ರೇಮ ದೊರೆಗೆ ನುಂಗಲಾ ತುತ್ತಾಗಿ ಪರಿಣಮಿಸಿತ್ತು..   

 

 ದೊರೆಗೆ ತನನ್ನ ಮಡದಿಯಾಗಿ ಸ್ವೀಕರಿಸುವಂತೆ ತನ್ನ ಮನದಾಳದ ಆಸೆ ವ್ಯಕ್ತಪಡಿಸುತ್ತಾಳೆ.. ಆದ್ರೆ ದೊರೆ ಹಿಂದೂ ಮುಸ್ಲಿಂ ಧರ್ಮಗಳು ಸಮಾಗಮವಾಗುವುದು ಸಾಧ್ಯವಿಲ್ಲವೆಂದು ಅರಿತು ಮೆಹೆಬೂ ಬ್ ಬನಕೆ ರೆಹೆನಾ, ಬೀವಿ ಬನಕರ್ ನಹೀ ದೊರೆಯ ಉತ್ತರ ರಂಭಾ ಕಣ್ಣಲ್ಲಿ ಜಾರಿದ ನಾಲ್ಕು ಹನಿಗಳು ಅರ್ಥ ಕಳೆದುಕೊಂಡ ಬದುಕಿನ ಕೊನೆ ತಿರುವಿಗೆ ತಂದುನಿಲ್ಲಿಸಿತು.

ಭಾರವಾದ ಮನಸ್ಸಿನಿಂದ ಎಂದಿನAತೆ ಮೆಹಫಿಲ್ ಕಾನದಲ್ಲಿ ನೃತ್ಯಮಾಡುವಾಗ ದೊರೆಗೆ ರಂಭಾ ಮತ್ತೆ ತನ್ನ ಪ್ರೇಮ ನಿವೇದಿಸುತ್ತಾಳೆ  ಆಗ ದೊರೆ ಮೊಹಮ್ಮದ್ ಆದಿಲ್ ಷಾ, ತುಮ್ ಕಿತನೆ ಪ್ಯಾರ ಕರತೆ ಹೋ ಮುಜಸೇ, ಯಹಾ ಸೇ ಗಿರಸಕ್ತೆ ಹೋ ಎಂದಾಗ ಮರು ಮಾತಿಲ್ಲದೆ ರಂಭಾ, ತನ್ನ ಪ್ರೀತಿಯನ್ನು ಪ್ರಮಾಣೀಕರಿಸುವುದಕ್ಕಾಗಿ ಗೋಲ ಗುಂಬಜ್ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ.....

 

ರಂಭಾಳ ಪ್ರಾಣ ಪಕ್ಷಿ ಹಾರಿಹೋದ ಮೇಲೆ ದೊರೆ ಮೊಹಮ್ಮದ್ ಆದಿಲ್ ಷಾ ರಂಭಾಳ ಪ್ರೇಮದ ನೆನಪಾಗಿ ರಂಭಾ ನರ್ತಿಸುತ್ತಿದ್ದ ಮೆಹೆಫಲ್ ಖಾನೆಯ ಮೇಲೆ ರಂಭಾಳ ಗೋರಿ ನಿರ್ಮಿಸಿ ರಾಜ ಪರಿವಾರದಲ್ಲೊಂದು ಸ್ಧಾನ ನೀಡಿದ. ನಂತರ ಸುಲ್ತಾನ ತೀರಿಕೊಂಡ. ಆಗ ದೊರೆಯ ಗೋರಿಯನ್ನ ರಂಭಾಳ ಗೋರಿ ಪಕ್ಕದಲ್ಲೇ ನಿರ್ಮಿಸಲಾಗಿದೆ. ಅಮರ ಪ್ರೇಮದ ಅಂತ್ಯ ದಾರೂಣವಾದ್ರೂ ಇಲ್ಲಿನ ಪ್ರತಿದಿನದ ಮುಂಜಾನೆಯ ಸೂರ್ಯ ರಶ್ಮಿ ಮಾತ್ರ ಸುಲ್ತಾನ ಮತ್ತು ರಂಭಾಳ ಗೋರಿಯ ಮೇಲೆ ಪ್ರಕಾಶಿಸುತ್ತೆ.. ಕಿರಣಗಳು ಅಂದಿನ ಪ್ರೇಮ ಚರಿತ್ರೆಯನ್ನ ಇಂದಿಗೂ ಹೇಳುತ್ತಿದೆ.. ಆದ್ರೆ ಇವರ ಪ್ರೇಮ ಚರಿತ್ರೆ ಇತಿಹಾಸದಲ್ಲಿ ದಾಖಲಾಗದ್ದೇ ಇರುವುದು  ಮಾತ್ರ ದುರಂತ..

ದತ್ತಾತ್ರೇಯ ಶ್ರೀ ಗುರುದೇವ ದತ್ತ ಜನ್ಮದ ಇತಿಹಾಸ

ಕಾಮೆಂಟ್‌ಗಳಿಲ್ಲ

 ದತ್ತಾತ್ರೇಯ  ಶ್ರೀ ಗುರುದೇವ ದತ್ತ ಜನ್ಮದ ಇತಿಹಾಸ


ದತ್ತನ ಜನ್ಮವು ಪ್ರಸ್ತುತ ಮನ್ವಂತರದ ಆರಂಭದಲ್ಲಿ ಪ್ರಥಮ ಪರ್ಯಾಯದಲ್ಲಿನ ತ್ರೇತಾಯುಗದಲ್ಲಿ ಆಗಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ.

ಪುರಾಣಗಳಿಗನುಸಾರ ಅತ್ರಿಋಷಿಗಳ ಪತ್ನಿ ಅನಸೂಯಾಳು ಮಹಾಪತಿವ್ರತೆಯಾಗಿದ್ದಳು. ಅವಳ ಪಾತಿವ್ರತ್ಯದ ಪರೀಕ್ಷೆ ತೆಗೆದುಕೊಳ್ಳಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನಿರ್ಧರಿಸಿದರು. ಒಮ್ಮೆ ಅತ್ರಿಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋದಾಗ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು) ಅತಿಥಿಗಳ ವೇಷದಲ್ಲಿ ಬಂದರು ಮತ್ತು ಅನಸೂಯಾಳ ಬಳಿ ಭೋಜನವನ್ನು ಬೇಡಿದರು. ಅದಕ್ಕೆ ಅನಸೂಯಾಳು, ‘ಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋಗಿದ್ದಾರೆ ಅವರು ಬರುವ ತನಕ ತಡೆಯಿರಿ’ ಎಂದಳು. ಆಗ ತ್ರಿಮೂರ್ತಿಗಳು ಅನಸೂಯಾಳಿಗೆ, ‘ಋಷಿಗಳಿಗೆ ಹಿಂದಿರುಗಲು ತಡವಾಗಬಹುದು; ನಮಗೆ ತುಂಬಾ ಹಸಿವಾಗಿದೆ; ತಕ್ಷಣ ಆಹಾರವನ್ನು ನೀಡು, ಇಲ್ಲವಾದರೆ ನಾವು ಬೇರೆ ಕಡೆ ಹೋಗುತ್ತೇವೆ’. ‘ಆಶ್ರಮಕ್ಕೆ ಬಂದ ಅತಿಥಿಗಳಿಗೆ ನೀವು ಇಚ್ಛಾಭೋಜನವನ್ನು ನೀಡುತ್ತೀರಿ,’ ಎಂದು ನಾವು ಕೇಳಿದ್ದೇವೆ; ಆದುದರಿಂದ ನಾವು ಇಚ್ಛಾಭೋಜನವನ್ನು ಮಾಡಲು ಬಂದಿದ್ದೇವೆ’ ಎಂದು ಹೇಳಿದರು. ನಂತರ ಅನಸೂಯಾಳು ಅವರನ್ನು ಸ್ವಾಗತಿಸಿದಳು ಮತ್ತು ಭೋಜನಕ್ಕೆ ಕುಳಿತುಕೊಳ್ಳಲು ವಿನಂತಿಸಿದಳು. ಅದರಂತೆಯೇ ಅವರು ಭೋಜನಕ್ಕೆ ಕುಳಿತುಕೊಂಡರು. ಅವಳು ಊಟಕ್ಕೆ ಬಡಿಸಲು ಬಂದಾಗ ಅವರು, ‘ನೀನು ವಿವಸ್ತ್ರಳಾಗಿ ನಮಗೆ ಬಡಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದರು. ‘ಅತಿಥಿಗಳನ್ನು ಹಿಂದಿರುಗಿಸಿ ಕಳುಹಿಸುವುದು ಅಯೋಗ್ಯವಾಗುತ್ತದೆ. ನನ್ನ ಮನಸ್ಸು ನಿರ್ಮಲವಾಗಿದೆ. ನನ್ನ ಪತಿಯ ತಪಸ್ಸಿನ ಫಲವು ನನ್ನನ್ನು ಕಾಪಾಡುವುದು,’ ಎಂದು ವಿಚಾರ ಮಾಡಿ ಅವಳು ಅತಿಥಿಗಳಿಗೆ ‘ಸರಿ, ನೀವು ಭೋಜನಕ್ಕೆ ಕುಳಿತುಕೊಳ್ಳಿರಿ’ ಎಂದಳು. ನಂತರ ಅಡುಗೆಮನೆಗೆ ಹೋಗಿ ಪತಿಯ ಸ್ಮರಣೆಯನ್ನು ಮಾಡಿದಳು, ಮನಸ್ಸಿನಲ್ಲಿ ‘ಅತಿಥಿಗಳು ನನ್ನ ಮಕ್ಕಳೇ ಆಗಿದ್ದಾರೆ’ ಎಂಬ ಭಾವವನ್ನಿಟ್ಟುಕೊಂಡಳು. ನಂತರ ನೋಡಿದರೆ ಅಲ್ಲಿ ಅತಿಥಿಗಳ ಜಾಗದಲ್ಲಿ ಅಳುತ್ತಿರುವ ಮೂರು ಮಕ್ಕಳಿದ್ದರು! ಅವರನ್ನು ಮಡಿಲಲ್ಲಿ ತೆಗೆದುಕೊಂಡು ಅವಳು ಸ್ತನಪಾನವನ್ನು ಮಾಡಿಸಿದಳು. ಮಕ್ಕಳು ಅಳುವುದನ್ನು ನಿಲ್ಲಿಸಿದರು.


ಅಷ್ಟರಲ್ಲಿಯೇ ಅತ್ರಿಋಷಿಗಳು ಬಂದರು. ಅವಳು ಅವರಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದಳು. ಅವಳು, ‘ಸ್ವಾಮಿನ್ ದೇವೇನ ದತ್ತಮ್|’ ಎಂದು ಹೇಳಿದಳು. ಇದರ ಅರ್ಥ  ‘ಹೇ ಸ್ವಾಮಿ, ದೇವರು ನೀಡಿದ (ಮಕ್ಕಳು).’ ಇದರಿಂದ ಅತ್ರಿಯವರು ಆ ಮಕ್ಕಳ ನಾಮಕರಣವನ್ನು ‘ದತ್ತ’ ಎಂದು ಮಾಡಿದರು. ನಂತರ ಅತ್ರಿಋಷಿಗಳು ಅಂತರ್‌ಜ್ಞಾನದಿAದ ಆ ಮಕ್ಕಳ ನಿಜ ಸ್ವರೂಪವನ್ನು ತಿಳಿದುಕೊಂಡು ಅವರಿಗೆ ನಮಸ್ಕಾರ ಮಾಡಿದರು. ಮಕ್ಕಳು ತೊಟ್ಟಿಲಲ್ಲಿ ಉಳಿದವು ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅವರೆದುರು ಪ್ರಕಟರಾದರು ಮತ್ತು ಪ್ರಸನ್ನರಾಗಿ ‘ವರ ಬೇಡಿರಿ’, ಎಂದರು. ಅತ್ರಿ ಮತ್ತು ಅನಸೂಯರು ‘ಬಾಲಕರು ನಮ್ಮ ಮನೆಯಲ್ಲಿಯೇ ಇರಲಿ’, ಎಂಬ ವರವನ್ನು ಕೇಳಿದರು. ಆ ವರವನ್ನು ನೀಡಿ ದೇವರು ತಮ್ಮತಮ್ಮ ಲೋಕಗಳಿಗೆ ತೆರಳಿದರು. ಮುಂದೆ ಬ್ರಹ್ಮದೇವನಿಂದ ಚಂದ್ರ, ಶ್ರೀವಿಷ್ಣುವಿನಿಂದ ದತ್ತ ಮತ್ತು ಶಂಕರನಿAದ ದೂರ್ವಾಸರಾದರು. ಮೂವರಲ್ಲಿ ಚಂದ್ರ ಮತ್ತು ದೂರ್ವಾಸರು ತಪಸ್ಸಿಗೆ ಹೋಗಲು ಅನುಮತಿಯನ್ನು ಪಡೆದು ಕ್ರಮವಾಗಿ ಚಂದ್ರಲೋಕ ಮತ್ತು ತೀರ್ಥಕ್ಷೇತ್ರಗಳಿಗೆ ಹೋದರು. ಮೂರನೆಯ ದತ್ತನು ವಿಷ್ಣುವಿನ ಕಾರ್ಯಕ್ಕಾಗಿ ಭೂಮಿಯ ಮೇಲೆ ಉಳಿದನು.

ಉಡುಪಿಯ ಎಂಟು ಪರ್ಯಾಯ ಮಠದ ನಿಮಗೆಷ್ಟು ಗೊತ್ತು ?

ಕಾಮೆಂಟ್‌ಗಳಿಲ್ಲ

ಉಡುಪಿಯ ಎಂಟು ಪರ್ಯಾಯ ಮಠದ ನಿಮಗೆಷ್ಟು ಗೊತ್ತು ? 


ಪರ್ಯಾಯವು ಉಡುಪಿಯ ಎಂಟು ಮಠಾಧೀಶರು ಎರಡು ವರ್ಷಗಳ ಅವಧಿಗೆ  ಒಬ್ಬೊಬ್ಬರಂತೆ   ಶ್ರೀಕೃಷ್ಣನನ್ನು ಆರಾಧಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಮತ್ತು ದೇವಾಲಯವನ್ನು ಆ ನಿಗದಿತ ಅವಧಿಯ ವರೆಗೆ  ನಿರ್ವಹಿಸುತ್ತಾರೆ.

ಪೂಜೆ ಮತ್ತು ಇತರ ಆಚರಣೆಗಳ ಬದಲಾವಣೆಯಲ್ಲಿರುವ ಸ್ವಾಮೀಜಿಯನ್ನು ಪರ್ಯಾಯ  ಸ್ವಾಮೀಜಿ ಎಂದು ಕರೆಯಲಾಗುತ್ತದೆ. ಅವರ  ಮಠವನ್ನು ನಂತರ ಪರ್ಯಾಯ ಮಠ ಎಂದು ಕರೆಯಲಾಗುತ್ತದೆ. ಅಧಿಕಾರಾವಧಿಯ ಅವಧಿಯನ್ನು ಪರ್ಯಾಯ  ಅವಧಿ ಎಂದು ಕರೆಯುತ್ತಾರೆ. ಶ್ರೀ ಕೃಷ್ಣ ಮಠದ ಉಸ್ತುವಾರಿಯನ್ನು ಹೊಸ ಸ್ವಾಮೀಜಿಗೆ ಹಸ್ತಾಂತರಿಸುವ ಸಮಾರಂಭವನ್ನು ಪರ್ಯಾಯ  ಹಬ್ಬ ಎಂದು ಕರೆಯಲಾಗುತ್ತದೆ.

ಶ್ರೀ ವಾದಿರಾಜರ ಕಾಲದವರೆಗೆ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು. ಹೀಗೆ ಪ್ರತಿಯೊಬ್ಬ ಸ್ವಾಮೀಜಿಗಳು ತಮ್ಮ ಅವಕಾಶವನ್ನು ಹದಿನಾರು ತಿಂಗಳಿಗೊಮ್ಮೆ ಪಡೆಯುತ್ತಿದ್ದರು. ನಂತರ ಶ್ರೀ ವಾದಿರಾಜರು ಈ ವ್ಯವಸ್ಥೆಯನ್ನು ಬದಲಾಯಿಸಿದರು. ಅವರು ಪರ್ಯಾಯಕ್ಕೆ  ಎರಡು ವರ್ಷಗಳ ಅವಧಿಯ ಸಂಪ್ರದಾಯವನ್ನು ಪ್ರಾರಂಭಿಸಿದರು.

ಶ್ರೀ ವಾದಿರಾಜರು ತಮ್ಮ ಮೊದಲ ಎರಡು ವರ್ಷದ ಪರ್ಯಾಯವನ್ನು ತಮ್ಮ ೫೨ ನೇ ವರ್ಷದಲ್ಲಿ ಕ್ರಿ.ಶ .೧೫೩೨-೩೩ ಯಲ್ಲಿ ಆಚರಿಸಿದರು. ಆದರೆ ಅವರು ತಮ್ಮ ಸ್ವಂತ ಪರ್ಯಾಯದಿಂದ ಸಂಪ್ರದಾಯವನ್ನು ಪ್ರಾರಂಭಿಸಲಿಲ್ಲ ಎಂದು ನಂಬಲಾಗಿದೆ. ಹದಿನಾರು ವರ್ಷಗಳ ಚಕ್ರದ ಒಂದು ಸುತ್ತು ಶ್ರೀ ಪಲಿಮಾರು  ಮಠದ ಪರ್ಯಾಯದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಪರ್ಯಾಯದ ಮೊದಲ ಎರಡು ವರ್ಷಗಳ ಅಧಿಕಾರಾವಧಿಯು ಕ್ರಿ.ಶ ೧೫೨೨-೨೩  ರಿಂದ  ಶ್ರೀ ಪಲಿಮಾರು  ಮಠದ ಪರ್ಯಾಯದೊಂದಿಗೆ. ಪ್ರಾರಂಭವಾಗಿರಬಹುದು ಎಂದು ತೀರ್ಮಾನಿಸಬಹುದು. ಈ ಸಂಪ್ರದಾಯದ ಪ್ರಕಾರ ಪ್ರತಿ ಮಠವು  ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ. 


ಪರ್ಯಾಯಕ್ಕೆ  ಸಿದ್ಧತೆಗಳು:

ಪರ್ಯಾಯ ಸಮಾರಂಭಕ್ಕೆ ಒಂದು ವರ್ಷದ ಮೊದಲು ಪೂರ್ವಭಾವಿ  ಸಿದ್ಧತೆಗಳು ಪ್ರಾರಂಭವಾಗುತ್ತವೆ. ಆ ಆಚರಣೆಗಳಲ್ಲಿ ಅಗ್ರಗಣ್ಯರ ಸಮ್ಮುಖದೊಂದಿಗೆ  ಆಯಾ ಮಠಗಳ ಹಿತ್ತಲಲ್ಲಿ ಪ್ರಾರಂಭವಾಗುತ್ತದೆ. 
ಇದಕ್ಕೆ ಬಾಳೆ ಮುಹೂರ್ತ ಎನ್ನುತ್ತಾರೆ.  
 
೧. ಬಾಳೆ ಸಸಿ    
೨. ತುಳಸಿ ಗಿಡ  
೩. ಕಬ್ಬಿನ ಮೊಳಕೆ 

ಬಾಳೆ ಸಸಿಗಳು, ತುಳಸಿ ಮತ್ತು ಕಬ್ಬಿನ ಮೊಳಕೆಗಳನ್ನು ಹೊತ್ತ ಭವ್ಯ ಮೆರವಣಿಗೆಯನ್ನು ರಥಬೀದಿಯ  ಸುತ್ತಲೂ ಕರೆದೊಯ್ಯಲಾಗುವುದು , ಅನಂತೇಶ್ವರ ಹಾಗು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವರು . ಇದು ಮುಗಿದನಂತರ ಸ್ವಾಮಿಗಳು ಕೃಷ್ಣಮಂದಿರಕ್ಕೆ ತೆರಳಿ ಅಲ್ಲಿ ನಾಣ್ಯಗಳನ್ನು ಅರ್ಪಿಸಿ ಈ ರೀತಿ ಪ್ರಾರ್ಥಿಸುವರು . ‘ಭಗವಂತ  ನಮ್ಮನ್ನು ಆಶೀರ್ವದಿಸಿ ಇದರಿಂದ ನಿಮ್ಮ ಪೂಜೆಗೆ ತುಳಸಿಯ ಕೊರತೆಯಾಗದಿರಲಿ  ಮತ್ತು ಭೋಜನಕ್ಕೆ  ಬಾಳೆ ಎಲೆಗಳ ಕೊರತೆಯಾಗದಿರಲಿ ಹೀಗೆ ಪ್ರಾರ್ಥಿಸಿ  ' ಅವರು ಶ್ರೀ ಮುಖ್ಯಪ್ರಾಣ ಮತ್ತು ಶ್ರೀ ಮಧ್ವಾಚಾರ್ಯರ ವಿಗ್ರಹಗಳಿಗೆ ನಮಸ್ಕರಿಸುತ್ತಾರೆ.  ನಂತರ   ಇತರ ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸುವರು. , ಕುದುರೆಗಳು, ಜಾನುವಾರುಗಳು, ಸಾಂಪ್ರದಾಯಿಕ ಡ್ರಮ್-ಬೀಟರ್ಗಳು ಮತ್ತು ಕಹಳೆ ವಾದ್ಯದವರೊಂದಿಗೆ , ಮಥುರಾ ಚತ್ರ ಆವರಣದ ಹಿತ್ತಲಿನಲ್ಲಿ ಅಂತ್ಯಗೊಳ್ಳುತ್ತದೆ . ಸ್ತೋತ್ರಗಳ ಪಠಣದ ಮಧ್ಯೆ ಹಿತ್ತಲಿನಲ್ಲಿ ಎರಡು ಸಾಲುಗಳಲ್ಲಿ ಬಾಳೆ ಸಸಿ, ಕಬ್ಬು ಮತ್ತು ತುಳಸಿಯನ್ನು ನೆಡಲಾಗುತ್ತದೆ . ನಂತರ ಸ್ವಾಮಿಗಳು ತಮ್ಮ ಮಠಕ್ಕೆ ಹಿಂತಿರುಗುತ್ತಾರೆ. ಬಾಳೆ ಮುಹೂರ್ತದೊಂದಿಗೆ  ಮುಂದಿನ ದಿನಗಳಲ್ಲಿ ಎರಡು ತಿಂಗಳ ನಂತರದಲ್ಲಿ ಅಕ್ಕಿ ಮುಹೂರ್ತ, ಆರು ತಿಂಗಳ ನಂತರದಲ್ಲಿ ಕಟ್ಟಿಗೆ  ಮುಹೂರ್ತ ಮತ್ತು ಪರ್ಯಾಯಕ್ಕೆ ಎಂಟು ವಾರಗಳ ಮೊದಲು ಭತ್ತ ಮುಹೂರ್ತ  ಎಂಬ ಮೂರು ಆಚರಣೆಗಳು ನಡೆಯುತ್ತª.ೆ  

ಬಡಗು ಮಾಳಿಗೆ  ಎಂಬುದು ಪರ್ಯಾಯದ ಅಧಿಕೃತ ಮಳಿಗೆಗಳ ಮನೆಯಾಗಿದೆ. ಈ ದಿನವೇ ಮುಂದಿನ ಪರ್ಯಾಯದ ಅಧಿಕಾರಿಗಳು ಈ ಸ್ಥಳಕ್ಕೆ ಪ್ರವೇಶಿಸುತ್ತಾರೆ. ಭತ್ತದ ಪಿಂಡಿಯನ್ನು  ಇಲ್ಲಿ ಒಂದು ವೇದಿಕೆಯ ಮೇಲೆ  ಇರಿಸಲಾಗುತ್ತದೆ. ಮತ್ತು ಅಚಾರ್ಯರು  ಪೂಜಾ ವಿಧಿಗಳನ್ನು ನಿರ್ವಹಿಸುತ್ತಾರೆ. ಪರ್ಯಾಯ ಮಠದ ವ್ಯವಸ್ಥಾಪಕರು ವಿದ್ವಾಂಸರಿಗೆ ಫಲ ತಾಂಬೂಲ ಮತ್ತು ಸಂಭಾವನೆಯನ್ನು ನೀಡುತ್ತಾರೆ. ಆ ದಿನದಿಂದ ಹೊಸ ಪರ್ಯಾಯ  ಮಠ ತನ್ನ ಕಟ್ಟಡದ ಉಸ್ತುವಾರಿ ವಹಿಸುತ್ತದೆ.

ಪ್ರತಿ ಪರ್ಯಾಯ ಸ್ವಾಮೀಜಿಗೆ ಕೃಷ್ಣ ಮಠದಲ್ಲಿ ದೈನಂದಿನ ಸೇವೆಗಳಿಗೆ ತುಳಸಿ ಮತ್ತು ಹಬ್ಬಗಳಿಗೆ ಬಾಳೆ ಎಲೆಗಳು ಬೇಕಾಗುತ್ತವೆ. ವಿಗ್ರಹಕ್ಕೆ ಅರ್ಪಣೆಗಾಗಿ ಬಾಳೆಹಣ್ಣು ಬೇಕು. ಆದ್ದರಿಂದ ಸ್ವಾಮೀಜಿಗಳು ತಮ್ಮ ಮಠಕ್ಕೆ ಸೇರಿದ ತೋಟಗಳಲ್ಲಿ ಈ ಸಸ್ಯಗಳನ್ನು ಬೆಳೆಸಲು ಪ್ರಾರಂಭಿಸಬೇಕು, ಇದರಿಂದಾಗಿ ಪರ್ಯಾಯ ಅವಧಿ ಪ್ರಾರಂಭವಾಗುವ ಹೊತ್ತಿಗೆ ಈ ಆಚರಣೆಗಳು ಎಲ್ಲಾ ಅವಶ್ಯಕತೆಗಳೊಂದಿಗೆ ಪ್ರಾರಂಭವಾಗಬಹುದು. 

ಆ ದಿನ ಮತ್ತೊಂದು ಆಚರಣೆ ಕೂಡ ನಡೆಯುತ್ತದೆ. ಆ ಹೊತ್ತಿಗೆ ಕಟ್ಟಿಗೆಯ  ರಥವನ್ನು ನಿರ್ಮಿಸಲಾಗುತ್ತದೆ. ಮೆರವಣಿಗೆಯೊಂದಿಗೆ ಅಲಂಕರಿಸಿದ ರಥದ  ಗೋಪುರವನ್ನು ತರಲಾಗುತ್ತದೆ. ಇದನ್ನು ವಿಧ್ಯುಕ್ತವಾಗಿ ಮುಖ್ಯ ವಾಸ್ತುಶಿಲ್ಪಿಗೆ ಹಸ್ತಾಂತರಿಸಲಾಗುತ್ತದೆ ನಂತರ ರಥದ ಮೇಲ್ಭಾಗದಲ್ಲಿ ಇಡಲಾಗುತ್ತದೆ. ಈ ಮೂಲಕ ಪರ್ಯಾಯದ ಎಲ್ಲಾ ಪ್ರಾಥಮಿಕ ಆಚರಣೆಗಳು ಮುಗಿಯುತ್ತವೆ .

ಪರ್ಯಾಯ ಯಾತ್ರೆ


ಪರ್ಯಾಯ ಸಮಾರಂಭಕ್ಕೆ ಸುಮಾರು ನಾಲ್ಕೈದು ತಿಂಗಳ ಮೊದಲು ಸ್ವಾಮೀಜಿಗಳು ವಿವಿಧ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಮಾಡುತ್ತಾರೆ. ಇದನ್ನು ಪರ್ಯಾಯ ಪೂರ್ವ ಸಂಚಾರ ಎಂದು ಕರೆಯಲಾಗುತ್ತದೆ.
ಪರ್ಯಾಯದ ನಂತರ ಸ್ವಾಮೀಜಿ ಉಡುಪಿಯಿಂದ ಹೊರಹೋಗುವಂತಿಲ್ಲ . ಆದ್ದರಿಂದ ಸಮಾರಂಭದ ಮೊದಲು ಅವರು ತಮ್ಮ ಶಿಷ್ಯರನ್ನು ಭೇಟಿಯಾಗಲು ವಿವಿಧ ಸ್ಥಳಗಳಿಗೆ ತೆರಳಿ ಅವರನ್ನು ಪರ್ಯಾಯ ಹಬ್ಬಕ್ಕೆ ಆಹ್ವಾನಿಸುತ್ತಾರೆ. ಅವರು ಕನ್ಯಾಕುಮಾರಿಯಿಂದ ಬದರಿಕಾಶ್ರಮವರೆಗಿನ ಎಲ್ಲಾ ತೀರ್ಥಯಾತ್ರೆಯ ಕೇಂದ್ರಗಳಿಗೆ ಭೇಟಿ ನೀಡಿ, ಆ ಸ್ಥಳಗಳಲ್ಲಿನ ದೇವತೆಗಳಿಗೆ ಸೇವೆಗಳನ್ನು ಸಲ್ಲಿಸುತ್ತಾರೆ .

ಶುಭ ದಿನದಂದು ಸ್ವಾಮೀಜಿಗಳು ತಮ್ಮ ಮಠದ ವಿಗ್ರಹಗಳಿಗೆ  ವಿಶೇಷ ಪೂಜೆ  ಸಲ್ಲಿಸುತ್ತಾರೆ ಮತ್ತು ತೀರ್ಥಯಾತ್ರೆ ಪ್ರಾರಂಭಿಸುತ್ತಾರೆ. ಅವರು ಕನ್ಯಾಕುಮಾರಿ, ರಾಮೇಶ್ವರ, ತಿರುಪತಿ, ಮಥುರಾ, ಬೃಂದಾವನ , ದ್ವಾರಕಾ, ಗಯಾ, ಕಾಶಿ, ಪ್ರಯಾಗ್, ಹೃಷಿಕೇಶ , ಹರಿದ್ವಾರ, ಮತ್ತು ಬದರಿ ಮುಂತಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ದಕ್ಷಿಣ ಮತ್ತು ಉತ್ತರ ಭಾರತದ ಪ್ರವಾಸವನ್ನು ಮುಗಿಸಿದ ನಂತರ ಅವರು ತಮ್ಮ ಜಿಲ್ಲೆಗೆ ಮರಳುತ್ತಾರೆ.

ನಂತರ ಅವರು ತಮ್ಮ ಜಿಲ್ಲೆಯ  ಯಾತ್ರಾ ಕೇಂದ್ರಗಳಿಗೆ ಭೇಟಿ ನೀಡಿ  ಶುಭ ಗಳಿಗೆಯಲ್ಲಿ  ಉಡುಪಿ ಪಟ್ಟಣಕ್ಕೆ ಪ್ರವೇಶಿಸುತ್ತಾರೆ.

ವಿವಿಧ ಪಟ್ಟಣಗಳಿಗೆ ಈ ಪ್ರವಾಸದ ಸಮಯದಲ್ಲಿ ಭಕ್ತರು ಸ್ವಾಮೀಜಿಯನ್ನು ಆಹ್ವಾನಿಸಿ ಗೌರವಿಸುತ್ತಾರೆ. ಅವರು ಪರ್ಯಾಯದ ಖರ್ಚುಗಳಿಗೆ ಧಾರಾಳವಾಗಿ ದಾನಗಳನ್ನು  ನೀಡುತ್ತಾರೆ.


ಪುರ ಪ್ರವೇಷ 

ಪರ್ಯಾಯ ಹಬ್ಬಕ್ಕೆ ಸುಮಾರು ಹತ್ತು ಹದಿನೈದು ದಿನಗಳ ಮೊದಲು ಸ್ವಾಮೀಜಿಗಳು ತಮ್ಮ ಪ್ರವಾಸಗಳನ್ನು ಮುಕ್ತಾಯಗೊಳಿಸಿ ವಿಧ್ಯುಕ್ತವಾಗಿ ಉಡುಪಿ ಪಟ್ಟಣಕ್ಕೆ ಪ್ರವೇಶಿಸುತ್ತಾರೆ. ಸ್ವಾಮಿಜಿಯನ್ನು ಸ್ವಾಗತಿಸಲು ಇಡೀ ಪಟ್ಟಣವನ್ನು ಅಲಂಕರಿಸಲಾಗುತ್ತದೆ .
ಸ್ವಾಮಿಜಿಯನ್ನು ಸ್ವಾಗತಿಸಲು ಆ ದಿನ ಉಡುಪಿ ಮಂಗಳೂರು ರಸ್ತೆಯ ಜೂಡು ಕಟ್ಟೆಯಲ್ಲಿ ದೊಡ್ಡ ಜನಸಂದಣಿಯನ್ನು ಕಾಣಬಹುದು. ಶಿವಮೊಗ್ಗ  ಕಡೆಯಿಂದ ಸ್ವಾಮೀಜಿ ನಗರವನ್ನು ಪ್ರವೇಶಿಸಿದರೆ ಉಡುಪಿ-ಕಾರ್ಕಳ  ಮಾರ್ಗದಲ್ಲಿರುವ ಕಡಿಯಾಲಿ ದೇವಸ್ಥಾನದ ಬಳಿ ಸ್ವಾಗತವನ್ನು ಏರ್ಪಡಿಸಲಾಗುವುದು. ಸ್ವಾಮೀಜಿ ಸ್ಥಳವನ್ನು ತಲುಪಿದ ಕೂಡಲೇ ಅವರನ್ನು ನಾಯಕರು ಮತ್ತು ಪಟ್ಟಣದ ಗಣ್ಯರು ಹಾರ ಹಾಕುತ್ತಾರೆ. ಹೂಗಳು ಮತ್ತು ಹುರಿದ ಅಕ್ಕಿಯನ್ನು ಮಾರ್ಗದಲ್ಲಿ ಚಿಮುಕಿಸಲಾಗುತ್ತದೆ.
ಜೂಡು ಕಟ್ಟೆಯಲ್ಲಿರುವ ಮಂಟಪದಿAದ ಸ್ವಾಮೀಜಿಯನ್ನು ಮೆರವಣಿಗೆಯಲ್ಲಿ ರಥ  ಬೀದಿಗೆ ಕರೆದೊಯ್ಯಲಾಗುವುದು . ವಿಖ್ಯಾತ ಯತಿಗಳ  ಪ್ರತಿಕೃತಿಗಳು ಮತ್ತು ಮಠದ ವಿಗ್ರಹಗಳನ್ನು ಪಲ್ಲಕ್ಕಿಯಲ್ಲಿ ಇರಿಸಲಾಗುತ್ತದೆ ಮತ್ತು ಮೆರವಣಿಗೆಯಲ್ಲಿ ತರಲಾಗುತ್ತದೆ. ಸಂಗೀತಗಾರರು ಪೈಪ್ ಮತ್ತು ಇತರ ವಾದ್ಯಗಳನ್ನು   ನುಡಿಸುತ್ತಾರೆ. ವಿದ್ವಾಂಸರು ವೇದದ ಸ್ತುತಿಗೀತೆಗಳನ್ನು ಹಾಡುತ್ತಾರೆ. ಸ್ವಾಮೀಜಿ ಅಲಂಕರಿಸಿದ ರಥದಲ್ಲಿ ಕುಳಿತಿರುತ್ತಾರೆ. ವಿಗ್ರಹಗಳು ಪಲ್ಲಕ್ಕಿಯಲ್ಲಿರುತ್ತವೆ .
ಬೀದಿಗಳೆಲ್ಲವೂ ರಥ ಬೀದಿಯವರೆಗೆ  ಚೆನ್ನಾಗಿ ಅಲಂಕರಿಸಲ್ಪಟ್ಟಿರುತ್ತವೆ . ಮಾರ್ಗದಲ್ಲಿ ವಿಭಿನ್ನ ಕಮಾನುಗಳು ಮತ್ತು ಮಂಟಪಗಳನ್ನು ನಿರ್ಮಿಸಲಾಗಿರುತ್ತದೆ  ಮತ್ತು ಅವುಗಳಿಗೆ ಆ ಮಠದ ಮಠಾಧೀಶರ ಹೆಸರನ್ನು ಇಡಲಾಗಿರುತ್ತದೆ 
ಮೆರವಣಿಗೆ ರಥ ಬೀದಿ  ತಲುಪಿದಾಗ ಸ್ವಾಮೀಜಿ ರಥದಿಂದ ಇಳಿದು ಚಂದ್ರಮೌಳೇಶ್ವರ, ಅನಂತೇಶ್ವರದ  ವರೆಗೆ ನಡೆದು ನಂತರ ಕೃಷ್ಣ ಮಠವನ್ನು ತಲುಪಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಸ್ವಾಮಿಗಳ ಮಠದ ಪ್ರವೇಶದ್ವಾರದಲ್ಲಿ ನವ ಗ್ರಹಗಳ ಪೂಜೆ ಮಾಡಲಾಗುತ್ತದೆ  ಮತ್ತು ಸ್ವಾಮೀಜಿ ಮಠಕ್ಕೆ ಪ್ರವೇಶಿಸುತ್ತಾರೆ. ರಥಬೀದಿಯಲ್ಲಿ  ನಡೆದ ಸಾರ್ವಜನಿಕ ಸಮಾರಂಭದಲ್ಲಿ ನಾಗರಿಕರು ಸ್ವಾಮೀಜಿಗೆ ಗೌರವ ಸಲ್ಲ್ಲಿಸುತ್ತಾರೆ. ಅವರು   ಹೂಮಾಲೆ ಹಾಕುತ್ತಾರೆ. ಸ್ವಾಮೀಜಿಯವರು ತಮ್ಮ ಹೊಸ ಯೋಜನೆಗಳನ್ನು ತಮ್ಮ ಪರ್ಯಾಯ  ಅವಧಿಯಲ್ಲಿ ಕೈಗೊಳ್ಳಲು ಪ್ರಸ್ತಾಪಿಸಿ ನಾಗರಿಕರ ಸಹಕಾರವನ್ನು ಕೇಳಿಕೊಳ್ಳುತ್ತಾರೆ.


ಹೊರೆಕಾಣಿಕೆ

ಪರ್ಯಾಯಕ್ಕೆ ಒಂದೆರಡು ದಿನಗಳ ಮೊದಲು ಭಕ್ತರು ಅಕ್ಕಿ , ಬೆಲ್ಲ, ಬೇಳೆಕಾಳುಗಳು, ತರಕಾರಿಗಳು, ತೆಂಗಿನಕಾಯಿ ಮತ್ತು ಇತರ ವಸ್ತುಗಳನ್ನು ಪರ್ಯಾಯ  ಹಬ್ಬದ ಸಮಯದಲ್ಲಿ ಸಾಮೂಹಿಕ ಆಹಾರಕ್ಕಾಗಿ ತಂದು ಸ್ವಾಮೀಜಿಗೆ ದಾನ ಮಾಡುತ್ತಾರೆ. ಈ ವಸ್ತುಗಳನ್ನು ಟ್ರಕ್‌ಗಳು, ಬಂಡಿಗಳು ಮತ್ತು ತಲೆ ಹೊರೆಗಳನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ. ಮೆರವಣಿಗೆಯು  ಉಡುಪಿಯ ವಿವಿಧ ಬೀದಿಗಳಲ್ಲಿ ಹಾದುಹೋಗಿ ಕೃಷ್ಣ ಮಠವನ್ನು ಪ್ರವೇಶಿಸುತ್ತವೆ. ಸ್ವಾಮೀಜಿಗಳು ಈ ಕೊಡುಗೆಗಳನ್ನು ಸ್ವೀಕರಿಸಿ ಭಕ್ತರನ್ನು ಆಶೀರ್ವದಿಸುತ್ತಾರೆ.
ಈ  ಸಮಾರಂಭವು , ಈಗಿರುವ ಸ್ವಾಮಿಗಳು ಉಸ್ತುವಾರಿಯನ್ನು   ಹಸ್ತಾಂತರಿಸುತ್ತಾರೆ ಮತ್ತು ಪರ್ಯಾಯ ಸ್ವಾಮಿಗಳು ಉಸ್ತುವಾರಿ ವಹಿಸಿಕೊಳ್ಳುವವರು. ಅಕ್ಕಿ ಮತ್ತು ತರಕಾರಿಗಳನ್ನು ಉಡುಪಿಯ ಇತರ ಸ್ವಾಮೀಜಿಗಳಿಗೆ ದಾನ ಮಾಡುತ್ತಾರೆ. ಎಲ್ಲಾ ದಾಸ್ತಾನುಗಳನ್ನು  ಮೆರವಣಿಗೆಯಲ್ಲಿ ತೆಗೆದುಕೊಂಡು ಬೇರೆ ಬೇರೆ ಮಠಗಳಿಗೆ ಕಳುಹಿಸಲಾಗುತ್ತದೆ.
ದಾಸ್ತಾನು ಕೊಡುವ ಕಾರಣ, ಪರ್ಯಾಯ ಉತ್ಸವಕ್ಕೆ ಭೇಟಿ ನೀಡುವ ಮತ್ತು ವಿವಿಧ ಮಠಗಳಲ್ಲಿ ಉಳಿದುಕೊಂಡಿರುವ ಎಲ್ಲಾ ಯಾತ್ರಿಕರಿಗೆ ಆಹಾರವನ್ನು ನೀಡಬೇಕು ಮತ್ತು ಸರಿಯಾಗಿ ನೋಡಿಕೊಳ್ಳಬೇಕು. ಆದ್ದರಿಂದ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಆತಿಥ್ಯವನ್ನು ನೀಡಲು ಸ್ವಾಮೀಜಿಗಳು ವಿವಿಧ ಮಠಗಳಿಗೆ  ಕೊಡುಗೆಯನ್ನು ನೀಡುತ್ತಾರೆ. ಇದನ್ನು ಸಹಕಾರದ ಸಂಕೇತವಾಗಿ ಏರ್ಪಡಿಸಲಾಗುತ್ತದೆ .
ಇತರ ಮಠಗಳ ಮುಖ್ಯಸ್ಥರು ಪರ್ಯಾಯಕ್ಕೆ  ಮುಂಚಿತವಾಗಿ ಸ್ವಾಮಿಜಿಯನ್ನು ಆಯಾ ಮಠಗಳಿಗೆ ಆಹ್ವಾನಿಸುತ್ತಾರೆ ಮತ್ತು ಸ್ವಾಮೀಜಿಯ ಗೌರವಾರ್ಥವಾಗಿ ಭವ್ಯವಾದ ಹಬ್ಬವನ್ನು ಏರ್ಪಡಿಸುತ್ತಾರೆ ಮತ್ತು ಹಣ ಮತ್ತು ಗಂಧದ ಲೇಪನ  ಮುಂತಾದ ಇತರ ವಸ್ತುಗಳನ್ನು ಅರ್ಪಿಸುತ್ತಾರೆ. ಹೊರಹೋಗುವ ಸ್ವಾಮೀಜಿಗಳು ಹಬ್ಬವನ್ನು ಏರ್ಪಡಿಸುತ್ತಾರೆ. 

ಮಕರ ಸಂಕ್ರಮಣದ ನಂತರದ ದಿನವನ್ನು ಚೂರ್ಣೋತ್ಸವ ಎಂದು ಆಚರಿಸಲಾಗುತ್ತದೆ. ಮರುದಿನ ಯಾವುದೇ ಹಬ್ಬಗಳನ್ನು ಆಚರಿಸಲಾಗುವುದಿಲ್ಲ. ಅವರ ಕೊನೆಯ ವಿಶೇಷ ಸೇವೆಗಳನ್ನು ಆಚರಿಸಲು ಹೊರಹೋಗುವ ಸ್ವಾಮೀಜಿಗೆ ಮೂರನೇ ದಿನವನ್ನು ನಿಗದಿಪಡಿಸಲಾಗಿದೆ. ನಾಲ್ಕನೇ ದಿನ ಪರ್ಯಾಯ ದಿನ.
ಸಾಮಾನ್ಯವಾಗಿ ಹಬ್ಬಗಳು ವೇಳಾಪಟ್ಟಿಯ ಪ್ರಕಾರ ಬರುತ್ತವೆ: ಜನವರಿ ೧೪-ಸಂಕ್ರಮಣ. ೧೫ ಜನವರಿ-ಚೂರ್ಣೋತ್ಸವ, ೧೬ ನೇ ಜನವರಿ -ವಿಶ್ರಾಂತಿ, ೧೭ನೇ ಜನವರಿ ಹೊರಹೋಗುವ ಸ್ವಾಮೀಜಿಗಳು ಹಬ್ಬವನ್ನು ಏರ್ಪಡಿಸುತ್ತಾರೆ . ೧೮-ಪರ್ಯಾಯ ಹಬ್ಬ.
ಹೊರಹೋಗುವ ಸ್ವಾಮೀಜಿಗಳು ಪರ್ಯಾಯದ ಹಿಂದಿನ ದಿನದಂದು ವಿಶೇಷ ಹಬ್ಬವನ್ನು ಏರ್ಪಡಿಸುತ್ತಾರೆ. ರಾತ್ರಿಯಲ್ಲಿ ಬ್ರಹ್ಮ ರಥೋತ್ಸವದಿಂದ ಅವರ  ಜವಾಬ್ದಾರಿಗಳು ಕೊನೆಗೊಳ್ಳುತ್ತವೆ. ಮರುದಿನ ಅವರು ನಿರ್ಮಾಲ್ಯ ವಿಸರ್ಜನಾ ಪೂಜೆಯನ್ನು ಮಾತ್ರ ಮಾಡಬೇಕಾಗುತ್ತದೆ . ನಂತರ ಮರುದಿನ ಉಸ್ತುವಾರಿ ವಹಿಸುವ  ಸ್ವಾಮೀಜಿಯ ಕರ್ತವ್ಯ.


ಪರ್ಯಾಯದ ಹಬ್ಬ

ಕೃಷ್ಣ ಮಠದ ಉಸ್ತುವಾರಿ ವಹಿಸಲಿರುವ ಸ್ವಾಮೀಜಿಗಳು ಹಿಂದಿನ ರಾತ್ರಿ ಉಡುಪಿಯಿಂದ ದಕ್ಷಿಣಕ್ಕೆ ೧೦ ಕಿಲೋಮೀಟರ್ ದೂರದಲ್ಲಿರುವ ದಂಡ ತೀರ್ಥ ಎಂಬ ಸ್ಥಳಕ್ಕೆ ಹೋಗುತ್ತಾರೆ. ಶ್ರೀ ಮಾಧ್ವಾಚಾರ್ಯರು ತಮ್ಮ ಬಾಲ್ಯದಲ್ಲಿ ಅಧ್ಯಯನ ಮಾಡುತ್ತಿದ್ದ ಸ್ಥಳ ಅದು. ತಮ್ಮ  ಶಿಕ್ಷಕರ  ತೋಟಗಳಿಗೆ ನೀರಾವರಿ ಮಾಡಲು ಅವರು  ತಮ್ಮ  ದಂಡದಿAದ ಕಾಲುವೆಯನ್ನು ಮಾಡಿದರು . ಆ ಕೊಳವನ್ನು ದಂಡತೀರ್ಥ ಎಂದು ಕರೆಯಲಾಯಿತು.
ಮುಂಜಾನೆ ೩-೦೦ ರ ಸುಮಾರಿಗೆ ಸ್ವಾಮೀಜಿ ಎದ್ದು ಪವಿತ್ರ ಕೊಳದಲ್ಲಿ ಸ್ನಾನ ಮಾಡಿ ಉಡುಪಿ ಕಡೆಗೆ ಪ್ರಯಾಣ ಪ್ರಾರಂಭಿಸುತ್ತಾರೆ . ಸುಮಾರು ೪-೦೦ ಗಂಟೆಗೆ . ಅವರು  ಉಡುಪಿಯ ಹೊರವಲಯವನ್ನು ತಲುಪುತ್ತಾರೆ  ಮತ್ತು ಭಕ್ತರ ದೊಡ್ಡ ಗುಂಪು ಸ್ವಾಮಿಜಿಯನ್ನು ಜೂಡು ಕಟ್ಟೆ ಎಂದು ಕರೆಯುವ ಸ್ಥಳದಲ್ಲಿ ಸ್ವಾಗತಿಸುತ್ತದೆ. ಉಡುಪಿಯ ಇತರ ಸ್ವಾಮೀಜಿಗಳು, ಉಸ್ತುವಾರಿಯ ಜೊತೆ  , (ಹಸ್ತಾಂತರಿಸಬೇಕಾದವರನ್ನು ಹೊರತುಪಡಿಸಿ), ಅಲ್ಲಿ ಒಟ್ಟುಗೂಡುತ್ತಾರೆ. ಉಸ್ತುವಾರಿಯನ್ನು ಹಸ್ತಾಂತರಿಸಲಿರುವ ಸ್ವಾಮೀಜಿಗಳು  ಹೊಸ ಪರ್ಯಾಯ ಸ್ವಾಮೀಜಿಯನ್ನು ಸ್ವಾಗತಿಸಲು ಕೃಷ್ಣ ಮಠದಲ್ಲಿಯೇ ಇರುತ್ತಾರೆ.
ಪರ್ಯಾಯ ಸ್ವಾಮೀಜಿಯನ್ನು ಸ್ವಾಗತಿಸಲು ಬರುವ ಸ್ವಾಮೀಜಿಗಳು ರೇಷ್ಮೆ  ಶಾಲು ಮತ್ತು ರೇಷ್ಮೆ  ಪೇಟವನ್ನು  ಚೆನ್ನಾಗಿ ಧರಿಸುತ್ತಾರೆ. ಆಗ ಅವರೆಲ್ಲರೂ ತಮ್ಮ ಪಲ್ಲಕ್ಕಿಯ ಮೇಲೆ ಕುಳಿತುಕೊಳ್ಳುತ್ತಾರೆ. ಪರ್ಯಾಯ ಮಠದ ಸಂಸ್ಥಾನ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಇರಿಸಲಾಗುತ್ತದೆ ಮತ್ತು  ತಲೆಯ ಮೇಲೆ  ಮೆರವಣಿಗೆಯ ಮೂಲಕ ತರಲಾಗುತ್ತದೆ 

ಕನಕನ  ಕಿಂಡಿಯ  ಮೂಲಕ ಕೃಷ್ಣ ವಿಗ್ರಹಕ್ಕೆ ಸ್ವಾಮೀಜಿ ನಮಸ್ಕರಿಸುತ್ತಾರೆ. ಪುರೋಹಿತರು ನವಗ್ರಹ ಪೂಜೆಯನ್ನು ನೆರವೇರಿಸಿ  ಸೇರಿದ  ಬ್ರಾಹ್ಮಣರಿಗೆ ಧಾನ್ಯಗಳು ಮತ್ತು ಹಣವನ್ನು ದೇಣಿಗೆ ನೀಡುತ್ತಾರೆ. ಅಲ್ಲಿಂದ ಸ್ವಾಮೀಜಿ ಚಂದ್ರಮೌಳೇಶ್ವರ ಮತ್ತು ಅನಂತೇಶ್ವರ ದೇವಸ್ಥಾನಕ್ಕೆ ಹೋಗುತ್ತಾರೆ.
ಇಬ್ಬರು ಸ್ವಾಮೀಜಿಗಳು ಗರ್ಭಗುಡಿಗೆ ಪ್ರವೇಶಿಸಿದಾಗ, ಇತರ ಸ್ವಾಮೀಜಿಗಳು ಬಡಗು ಮಾಳಿಗೆ ಎಂದು ಕರೆಯಲ್ಪಡುವ ಕಟ್ಟಡದ ಕಡೆಗೆ ಮುಂದುವರಿಯುತ್ತಾರೆ, ತಮ್ಮ ಅಲಂಕರಿಸಿದ ಆಸನಗಳ ಮೇಲೆ ಕುಳಿತು ಪರ್ಯಾಯ ಸ್ವಾಮೀಜಿಗಾಗಿ ಕಾಯುತ್ತಾರೆ.

ಪರ್ಯಾಯ ಸಮಾರಂಭ

ಸ್ವಾಮೀಜಿಗಳು ಮಠಕ್ಕೆ ಪ್ರವೇಶಿಸಿ ತಮ್ಮ ವಿಗ್ರಹಗಳ ಪೆಟ್ಟಿಗೆಯನ್ನು ತೀರ್ಥ ಮಂಟಪದಲ್ಲಿ ಇಡುತ್ತಾರೆ ಮತ್ತು ಆರತಿ ಬೆಳಗುತ್ತಾರೆ .
ನಂತರ ಸ್ವಾಮೀಜಿಗಳು ಇಬ್ಬರೂ ಗರ್ಭಗುಡಿಗೆ ಪ್ರವೇಶಿಸಿ ವಿಗ್ರಹದ ಮುಂದೆ ಪ್ರಾರ್ಥಿಸುತ್ತಾರೆ. ಅವರು ಮುಖ್ಯಪ್ರಾಣ ವಿಗ್ರಹದ ಮುಂದೆ ಪ್ರಾರ್ಥಿಸುತ್ತಾರೆ ಮತ್ತು ಚಂದ್ರಶಾಲ ಸಭಾಂಗಣದಲ್ಲಿ ಶ್ರೀ ಕೃಷ್ಣ, ಮುಖ್ಯಪ್ರಾಣ ಮತ್ತು ಗರುಡರ ವಿಗ್ರಹಗಳ ಮುಂದೆ ನಮಸ್ಕರಿಸುತ್ತಾರೆ.
ನಂತರ ಜವಾಬ್ದಾರಿಯನ್ನು  ಹಸ್ತಾಂತರಿಸುವ ಪ್ರಮುಖ ಆಚರಣೆ ಸಿಂಹಾಸನ ಎಂದು ಕರೆಯಲ್ಪಡುವ ಕೋಣೆಯಲ್ಲಿ ನಡೆಯುತ್ತದೆ. ಅಧಿಕಾರದ ಈ ಧಾರ್ಮಿಕ ವರ್ಗಾವಣೆಯಲ್ಲಿ ಮಠದ ಕೆಲವೇ ಅಧಿಕಾರಿಗಳು ಭಾಗವಹಿಸುತ್ತಾರೆ.
ಹೊಸ ಪರ್ಯಾಯ ಸ್ವಾಮೀಜಿ ವಿಗ್ರಹಗಳ ಪೆಟ್ಟಿಗೆಯನ್ನು ಪವಿತ್ರ ಆಸನದಲ್ಲಿ ಇರಿಸಿ ಮತ್ತು ಆರತಿಯನ್ನು  ಬೆಳಗಿ . ನಂತರ ಹೊರಹೋಗುವ ಪರ್ಯಾಯ ಸ್ವಾಮೀಜಿ ಮಧ್ವಾಚಾರ್ಯರ ಆಸನದ ಮೇಲೆ ಕುಳಿತು ಪರ್ಯಾಯ ಸ್ವಾಮೀಜಿಯನ್ನು ಅವರ ಪಕ್ಕದಲ್ಲಿ ಕುಳ್ಳಿರಿಸಿ  ಗಂಧ ಲೇಪನ  ಮತ್ತು ಇತರ ಗೌರವದ ವಸ್ತುಗಳನ್ನು ಅರ್ಪಿಸಿ ಗೌರವಿಸುತ್ತಾರೆ.

ಕಾರ್ಯಕ್ರಮದ ಮುಂದಿನ ವಿಷಯ  ಸಿಂಹಾಸನವನ್ನು ಏರುವುದು. ಹೊರಹೋಗುವ ಸ್ವಾಮೀಜಿ ಮಧ್ವಾಚಾರ್ಯರ ಆಸನದಿಂದ ಎದ್ದು, ಹೊಸ ಸ್ಥಾನದಲ್ಲಿರುವವರ ಕೈಗಳನ್ನು ಹಿಡಿದು ಆಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುತ್ತಾರೆ. ನಂತರ ಅವರು  ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಆರೋಹಣವಾದ ಕೂಡಲೇ ಸ್ವಾಮೀಜಿಯನ್ನು ಅಧಿಕೃತವಾಗಿ ಪರ್ಯಾಯ ಸ್ವಾಮೀಜಿ ಎಂದು ಕರೆಯಲಾಗುತ್ತದೆ.

ಅಕ್ಷಯ ಪಾತ್ರದ ವರ್ಗಾವಣೆ

ಆಸನಗಳನ್ನು ವಿನಿಮಯ ಮಾಡಿದ ನಂತರ ಇಬ್ಬರು ಸ್ವಾಮೀಜಿಗಳು ಪರಸ್ಪರರ ಕುಶಲವನ್ನು  ವಿಚಾರಿಸುತ್ತಾರೆ ಮತ್ತು ಗರ್ಭಗೃಹದ ಪ್ರವೇಶದ್ವಾರದಲ್ಲಿರುವ ಶ್ರೀ ಮಧ್ವಾಚಾರ್ಯರ ವಿಗ್ರಹದ ಕಡೆಗೆ ಹೋಗುತ್ತಾರೆ. ಅವರು ಬಿಲ್ಲುಪೊಟಿಗೆ  ತೀರ್ಥವನ್ನು ಅರ್ಪಿಸುತ್ತಾರೆ. ಹೊರಹೋಗುವ ಸ್ವಾಮೀಜಿಗಳು ಮಧ್ವಾಚಾರ್ಯರ ಕಾಲದಿಂದ ಸಂರಕ್ಷಿಸಲ್ಪಟ್ಟಿರುವ ಹಳೆಯ-ಹಳೆಯ ಅಕ್ಷಯಪಾತ್ರೆ  ಸೌಟು ಮತ್ತು ದೇವಾಲಯದ ಕೀಲಿಗಳನ್ನು ಹಸ್ತಾಂತರಿಸುತ್ತಾರೆ. ಈ ಆಚರಣೆಯೊಂದಿಗೆ ಶ್ರೀ ಕೃಷ್ಣ ಮಠದ ನಿರ್ವಹಣೆ ಅಧಿಕೃತವಾಗಿ ಶ್ರೀ ಕೃಷ್ಣನ ನಿರ್ವಹಣೆ  ಆಚರಣೆಯಾಗಿದೆ  (ಈ ಅಕ್ಷಯ ಪಾತ್ರೆಯನ್ನು ದ್ರೌಪತಿಗೆ ಶ್ರೀಕೃಷ್ಣನು ಕೊಟ್ಟದ್ದು ಎಂಬ ಪ್ರತೀತಿ )

ಸಮಾರಂಭದ ಕೊನೆಯ ಕಾರ್ಯಕ್ರಮವೆಂದರೆ ರಾಜಾಂಗಣದಲ್ಲಿ  ದರ್ಬಾರ್    ಎಂದು ಕರೆಯಲ್ಪಡುವ ದೊಡ್ಡ ಸಭೆ. ಎಲ್ಲಾ ಸ್ವಾಮೀಜಿಗಳು ಸುಮಾರು ಬೆಳಿಗ್ಗೆ ೭-೦೦ ಗಂಟೆಗೆ ಮೆರವಣಿಗೆಯಲ್ಲಿ ಬರುತ್ತಾರೆ. ಈ ಸಭಾಂಗಣಕ್ಕೆ. ತಮ್ಮ ಆಮಂತ್ರಣ ಪತ್ರಗಳೊಂದಿಗೆ ಅಲ್ಲಿ ಒಟ್ಟುಗೂಡಿದ ಜನರೊಂದಿಗೆ ಇಡೀ ಪ್ರದೇಶವು ಏಳು ಗಂಟೆಗೇ  ಕಿಕ್ಕಿರಿದಿರುತ್ತದೆ . ಈ ಸ್ಥಳವು ಸುಮಾರು ಇಪ್ಪತ್ತು ಸಾವಿರ ಜನರಿಗೆ ಅವಕಾಶ ಕಲ್ಪಿಸುತ್ತದೆ.

ವೇದಗಳಿಂದ ಸ್ತುತಿಗೀತೆಗಳನ್ನು ಜಪಿಸಿದ ನಂತರ ಸ್ವಾಮೀಜಿಗಳು ಭಕ್ತರನ್ನು ಆಶೀರ್ವದಿಸುತ್ತಾರೆ. ಹೊರಹೋಗುವ ಸ್ವಾಮೀಜಿ ಎಲ್ಲರಿಗೂ ವಿದಾಯ ಹೇಳುತ್ತಾರೆ ಮತ್ತು ಹೊಸ ಪರ್ಯಾಯ ಸ್ವಾಮೀಜಿ ಕೃಷ್ಣ ಮಠದಲ್ಲಿ ಸೌಲಭ್ಯಗಳ ಸುಧಾರಣೆಗೆ ತನ್ನ ಯೋಜನೆಗಳ ಯೋಜನೆಗಳನ್ನು ಪ್ರಕಟಿಸುತ್ತಾರೆ. ಸಮಾಜದ ವಿವಿಧ ಸಮುದಾಯಗಳ  ನಾಯಕರು  ಈ ಸಂದರ್ಭದಲ್ಲಿ ಹೊಸ ಪರ್ಯಾಯ ಸ್ವಾಮೀಜಿಯನ್ನು ಸನ್ಮಾನಿಸುತ್ತಾರೆ

ಸಂಕ್ರಾಂತಿ ಹಬ್ಬದ ವಿಶೇಷತೆ ಏನು ಗೊತ್ತಾ?

ಕಾಮೆಂಟ್‌ಗಳಿಲ್ಲ

 ಸಂಕ್ರಾಂತಿ ಹಬ್ಬವನ್ನು ಆಚರಿಸೋದು ಏಕೆ?, ಈ ಹಬ್ಬದ ವಿಶೇಷತೆಗಳೇನು, 
ವೈಜ್ಞಾನಿಕವಾಗಿ ಇರುವ ಕಾರಣಗಳೇನು ?

ಸಂಕ್ರಾಂತಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ.. 


ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಸಂಕ್ರಾಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತೆ...ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬೀಳುತ್ತದೆ. ಇದನ್ನು ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭ ಎಂದೂ ಕರೆಯಲಾಗುತ್ತದೆ. 


ಸಂಕ್ರಾಂತಿ ದಿನದ ಬಗ್ಗೆ ಖಗೋಳ ಶಾಸ್ತ್ರ ಏನು ಹೇಳುತ್ತೆ? 

ಖಗೋಳ ಶಾಸ್ತ್ರದ ಪ್ರಕಾರ ಸಂಕ್ರಾಂತಿ ದಿನಕ್ಕೆ ಬಹಳ ವೈಜ್ಞಾನಿಕವಾದ ವಿವರಣೆ ಇದೆ... ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ 12ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ.


ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು. ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ ಅಂದರೆ ಉತ್ತರಕ್ಕೆ ಅಥವಾ ಎಡಕ್ಕೆ ಅಂದರೆ ದಕ್ಷಿಣಕ್ಕೆ ಆಗುತ್ತದೆ. ಚಳಿಗಾಲ ಅಂದರೆ ಇರುಳಿನ ಪ್ರಮಾಣ ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ. 


ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. 


ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. ಸುಮಾರು ಡಿಸೆಂಬರ್ 22 ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ.


ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ದಿಯನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ.


ಅಂದರೆ ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಣಯಾನದ ದಿನ. ಬೇಸಗೆ ಮುಗಿದು ಮುಂಬರುವ ಚಳಿಗಾಲದ ಮುನ್ಸೂಚನೆ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. ಸುಮಾರು ಜೂನ್ 21 ಈ ದಿನ. ಇಷ್ಟೆಲ್ಲಾ ವಿವರಣೆ ಅನ್ವಯಿಸುವುದು ಭೂಮಂಡಲದ ಭೂಮಧ್ಯರೇಖೆಯ ಉತ್ತರಾರ್ಧ. ಇದೇ ರೀತಿಯ ಆದರೆ ತದ್ವಿರುದ್ಧವಾದ ವಿವರಣೆ ದಕ್ಷಿಣಾರ್ಧಕ್ಕೆ ಅನ್ವಯಿಸುತ್ತದೆ. 


ಹೀಗೆ ಕಾಣುವ ಸೂರ್ಯನ ಚಲನೆಗೆ ಭೂಮಿಯ ಅಕ್ಷರೇಖೆ ಅಂದರೆ ಆಕ್ಸಿಸ್ ಸುಮಾರು 22 1/2 ಡಿಗ್ರಿ ವಾಲಿರುವುದು ಕಾರಣ. ಯಾವುದಾದರೂ ಒಂದು ನಿಗದಿತ ಜಾಗದಲ್ಲಿ ದಿನವೂ ನಿಂತು, ದಿನದ ಒಂದೇ ನಿಗದಿತ ಸಮಯದಲ್ಲಿ, ಆಗಸದಲ್ಲಿ ಸೂರ್ಯನ ಸ್ಥಾನವನ್ನು ಗುರುತು ಹಾಕಿಕೊಂಡು, ಈ ರೀತಿ ವರ್ಷವಿಡೀ ಮಾಡಿದರೆ, ಗುರುತು ಹಾಕಿಕೊಂಡ ಆ ಬಿಂದುಗಳೆಲ್ಲಾ ಸುಮಾರು '8'ರ ಆಕೃತಿಯಲ್ಲಿ ಕಾಣುತ್ತವೆ.


ಸಂಕ್ರಾಂತಿಯನ್ನು ಎಲ್ಲೆಲ್ಲಿ ಹೇಗೆ ಆಚರಿಸುತ್ತಾರೆ ಗೊತ್ತಾ? 

ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. 


ಎಳ್ಳು ಬೆಲ್ಲ ಬೀರುವುದೇಕೆ ಗೊತ್ತಾ?

ಸಂಕ್ರಾಂತಿ ದಿನ ಎಳ್ಳು ಬೀರುವುದರ ಹಿಂದೆ ವೈಜ್ಞಾನಿಕವಾದ ಕಾರಣವಿದೆ. ಸಂಕ್ರಾಂತಿ ಸಮಯದಲ್ಲಿ ಚಳಿ ಹೆಚ್ಚಿರುವುದರಿಂದ ದೇಹವನ್ನು ಬೆಚ್ಚಗಿರಿಸಲು ಎಳ್ಳು ಸಹಕಾರಿಯಾಗುತ್ತದೆ. ಅಲ್ಲದೆ ಎಳ್ಳು ಮತ್ತು ಬೆಲ್ಲ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇನ್ನು ಕೊಬ್ಬರಿ, ಹುರಿಗಡಲೆ ಚರ್ಮದ ಆರೋಗ್ಯ ಕಾಪಾಡುತ್ತವೆ. ಹೀಗಾಗಿ ಎಲ್ಲರೂ ಎಳ್ಳು ಬೆಲ್ಲ ಬೀರುತ್ತಾರೆ... 


ಮಕರ ಸಂಕ್ರಾತಿ ದಿನದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಬೆಲ್ಲ ಹಂಚುವುದು ಎಂಬ ನಂಬಿಕೆ ಇದೆ. 


ರೈತರಿಗೆ ಇದು ಸುಗ್ಗಿಯ ಹಬ್ಬ. ಈ ಮಂಗಳಕರ ದಿನದಂದು, ಹೆಣ್ಣುಮಕ್ಕಳು ಎಳ್ಳು ಬೀರಿ, "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ. 


ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆ ಯರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ.


ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆ. ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು "ಕಿಚ್ಚು ಹಾಯಿಸುವುದು" ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.


ಇದೇ ರೀತಿಯಾಗಿ ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೆÇಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ ಮೊದಲ ದಿನ ಭೋಗಿ ಅಂದ್ರೆ ಹೊಸ ಬಟೆಗಳನ್ನು ತೊಡಲಾಗುತ್ತದೆ. ನಂತರ ಪೊಂಗಲ್. ಅಂದು ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲವನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ. ಆನಂತರ ಮಾಟ್ಟು ಪೊಂಗಲ್ ಅಂದರೆ ಗೋ ಪೂಜೆ ಮಾಡಲಾಗುತ್ತದೆ. ಕೆಲವು ಕಡೆ ಜಲ್ಲಿಕಟ್ಟು ಎಂಬ ಗೂಳಿಗಳನ್ನು ಪಳಗಿಸುವ ಆಟ ಸಹ ನಡೆಸಲಾಗುತ್ತದೆ. ಕೊನೆಯದಾಗಿ ಕಾಣುಮ್ ಪೊಂಗಲ್. ಕಾಣುಮ್ ಅಂದರೆ ನೋಡುವುದು ಇಲ್ಲವೇ ಕಾಣುವುದು. ಈ ದಿನದಂದು ಜನ ತಮ್ಮವರೊಂದಿಗೆ ಸಮಯ ಕಳೆಯುತ್ತಾರೆ. ಈ ದಿನದಂದು ಮದುವೆ ಮುಹೂರ್ತಗಳನ್ನೂ ಇಡಲಾಗುತ್ತದೆ.


ಆಂಧ್ರ ಪ್ರದೇಶದಲ್ಲೂ ಇದೇ ರೀತಿಯಾಗಿ ಆಚರಣೆ ನಡೆಸಲಾಗುತ್ತದೆ. ಕೇರಳದಲ್ಲಿ ಅಯ್ಯಪ್ಪ ಸ್ವಾಮಿಯ ಮಕರ ಜ್ಯೋತಿಯನ್ನು ಎಲ್ಲರೂ ನೋಡಿರುತ್ತೀರಿ... 


ಇನ್ನು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಎಂದು ಹೆಸರು. ಹೀಗೆ ಸಂಕ್ರಾಂತಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಾಗಿ ಆಚರಿಸುತ್ತಾರೆ... 


© all rights reserved
made with by templateszoo